ರಾಜ್ಯದಲ್ಲಿ ಮತ್ತಷ್ಟು ತೀವ್ರವಾಗಲಿದೆ ಚಳಿ, ಹವಾಮಾನ ಇಲಾಖೆ ಎಚ್ಚರಿಕೆ ಏನು?

Mist-During-Winter-Near-Mandagadde

ಬೆಂಗಳೂರು: ರಾಜ್ಯದಲ್ಲಿ ಚಳಿಯ (Cold) ತೀವ್ರತೆ ಹೆಚ್ಚಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 4 ರಿಂದ 6 ಡಿಗ್ರಿ ಸೆಲ್ಸಿಯಸ್‌ ಕುಸಿತವಾಗಿದೆ. ಇದರಿಂದ ಮಧ್ಯರಾತ್ರಿ ಮತ್ತು ಮುಂಜಾನೆ ಥಂಡಿ ಅನುಭವವಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಆವರಿಸುತ್ತಿದೆ. ತಂಪಾದ ಗಾಳಿ ಬೀಸುತ್ತಿರುವ ಹಿನ್ನೆಲೆ ಹಗಲಿನಲ್ಲೂ ಚಳಿಯ ಅನುಭವಾಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ತೀವ್ರತೆ ಚಳಿ ಶುರುವಾಗಬೇಕಿತ್ತು. ಈ ಬಾರಿ ವಾಡಿಕೆಗಿಂತ ಮೊದಲೇ ಚಳಿ ಶುರುವಾಗಿದ್ದು, ದಿನೇದಿನೆ ತೀವ್ರತೆ ಹೆಚ್ಚುತ್ತಿದೆ. … Read more

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಚಳಿ, ನಗರವನ್ನು ಆವರಿಸಿತು ಭಾರಿ ಮಂಜು, ಎಷ್ಟಿದೆ ಉಷ್ಣಾಂಶ?

Mist-During-Winter-Near-Mandagadde

ಶಿವಮೊಗ್ಗದ ಲೈವ್.ಕಾಂ | SHIMOGA NEWS | 7 ಜನವರಿ 2022 ಕೆಲವು ದಿನ ಕಡಿಮೆಯಾಗಿದ್ದ ಚಳಿ ಜಿಲ್ಲೆಯಲ್ಲಿ ಪುನಃ ಹೆಚ್ಚಳವಾಗಿದೆ. ಇವತ್ತು ಶಿವಮೊಗ್ಗದ ವಿವಿಧೆಡೆ ಮಂಜು ಆವರಿಸಿದೆ. ಮಂಜು ಕವಿದಿರುವುದರಿಂದ ಥಂಡಿಯ ಪ್ರಮಾಣವು ಹೆಚ್ಚಿದೆ. ಮನೆಯಿಂದ ಹೊರ ಬರುವವರು ಸ್ವೆಟರ್ ಸೇರಿದಂತೆ ಬೆಚ್ಚನೆಯ ವಸ್ತ್ರಗಳನ್ನು ಧರಿಸುವಂತಾಗಿದೆ. ಮಂಜು ಆವರಿಸಿರುವುದರಿಂದ ವಾಹನ ಸಾವರರು ಹೆಡ್ ಲೈಟ್ ಇಲ್ಲದೆ ಚಾಲನೆ ಮಾಡಲು ಆಗುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್’ನಿಂದ  ಗರಿಷ್ಠ 33 ಡಿಗ್ರಿ ಸೆಲ್ಸಿಯಸ್’ನಷ್ಟು … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ತಂಪು, ತಂಪು, ದಟ್ಟ ಮಂಜು, ಇನ್ನಷ್ಟು ದಿನ ಮೈ ಕೊರೆಯಲಿದೆ ಥಂಡಿ

Mist-During-Winter-Near-Mandagadde

ಶಿವಮೊಗ್ಗದ ಲೈವ್.ಕಾಂ | SHIMOGA NEWS |  30 ಡಿಸೆಂಬರ್ 2021 ಶಿವಮೊಗ್ಗ ಜಿಲ್ಲೆಯಲ್ಲಿ ಚಳಿ ಹೆಚ್ಚಾಗುತ್ತಿದೆ. ಇನ್ನೂ ಹದಿನೈದು ದಿನ ಚಳಿಯ ತೀವ್ರತೆ ಇದೆ ರೀತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ನಡುವೆ ಬೆಳಗಿನ ಹೊತ್ತು ದಟ್ಟ ಮಂಜು ಆವರೀಸುತ್ತಿದ್ದು, ಚಳಿಯ ತೀವ್ರತೆ ಹೆಚ್ಚಿಸುತ್ತಿದೆ. ಜಿಲ್ಲೆಯಾದ್ಯಂತ 13 ಡಿಗ್ರಯಿಂದ 18 ಡಿಗ್ರಿವರೆಗೂ ಚಳಿಯ ತೀವ್ರತೆ ಇದೆ. ಹಾಗಾಗಿ ಬೆಳಗಿನ ಹೊತ್ತು ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಗಢಗಢ ನಡುಗಿಸುವ ಚಳಿ … Read more