ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮಾವಿನ ಮರ, ಪ್ರಯಾಣಿಕರಿಗೆ ಗಾಯ, ಎಲ್ಲಿ? ಹೇಗಾಯ್ತು ಘಟನೆ?
ಶಿವಮೊಗ್ಗ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಪ್ರಯಾಣಿಕರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಚಿನ್ನಮನೆ ಸಮೀಪ ಮಧ್ಯಾಹ್ನ ಘಟನೆ ಸಂಭವಿಸಿದೆ. ಕಾರು ಶಿವಮೊಗ್ಗ ಕಡೆಯಿಂದ ಆಯನೂರು ಮಾರ್ಗವಾಗಿ ರಿಪ್ಪನ್ಪೇಟೆ ಕಡೆಗೆ ತೆರಳುತಿತ್ತು. ಹೆದ್ದಾರಿಯಲ್ಲಿ ಸಾಗುವಾಗ ಮಾವಿನ ಮರ ಉರುಳಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿವಾಗಿದೆ. ಕೂಡಲೆ ಸ್ಥಳೀಯರು, ಇತರೆ ವಾಹನ ಸವಾರರು ಕಾರಿನಲ್ಲಿದ್ದವರನ್ನು ರಕ್ಷಿಸಿ ಆಯನೂರು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಕಾರಿನ ಮೇಲ್ ಸಂಪೂರ್ಣ ಹಾನಿಯಾಗಿದ್ದು, ಗಾಜುಗಳು ಒಡೆದು ಹೋಗಿವೆ. tree falls on moving car