ಶಿವಮೊಗ್ಗದಲ್ಲಿ ಮಳೆಗೆ ಮನೆ ಗೋಡೆ ಕುಸಿತ, ಅದೃಷ್ಟವಶಾತ್‌ ತಪ್ಪಿದ ಅನಾಹುತ

House-damage-due-to-rain-in-milagatta.

SHIMOGA, 25 AUGUST 2024 : ಜೋರು ಮಳೆಗೆ ಶಿಮೊವಗ್ಗದಲ್ಲಿ ಮನೆ (House) ಕುಸಿದಿದೆ. ಮಿಳಘಟ್ಟ ಬಸ್‌ ನಿಲ್ದಾಣದ ಸಮೀಪ ಕುಲುಶುಂಬಿ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಮಳೆಯಿಂದಾಗಿ ಕಳೆದ ರಾತ್ರಿ ಗೋಡೆ ಕುಸಿದಿದೆ. ಅದೃಷ್ಟವಶಾತ್‌ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ತುರ್ತು ನೆರವು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ. ಇದನ್ನೂ ಓದಿ ⇒ ಆರೆಂಜ್‌ ಅಲರ್ಟ್‌, ಹೊಸನಗರ, ತೀರ್ಥಹಳ್ಳಿಯ ವಿವಿಧೆಡೆ ಮಳೆ ಅಬ್ಬರ, ಜಿಲ್ಲೆಯ ವಿವಿಧೆಡೆ ಹೇಗಿದೆ ವರ್ಷಧಾರೆ?

ಶಿವಮೊಗ್ಗ ರಾಗಿಗುಡ್ಡದಲ್ಲಿ ಮನೆ ಗೋಡೆ ಕುಸಿತ

House-Wall-Collapse-in-Shimoga-Ragigudda

ಶಿವಮೊಗ್ಗ | ಭಾರಿ ಮಳೆಯಿಂದಾಗಿ ನಗರದ ರಾಗಿಗುಡ್ಡದಲ್ಲಿ ಮನೆಯೊಂದರ ಗೋಡೆ (WALL COLLAPSE) ಕುಸಿದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಸಂಭವಿಸಿದೆ. ರಾಗಿಗುಡ್ಡ ನಾಲ್ಕನೆ ತಿರುವಿನಲ್ಲಿರುವ ನೂರುಲ್ಲಾ ಎಂಬುವವರಿಗೆ ಸೇರಿದ ಮನೆಯ ಗೋಡೆ (WALL COLLAPSE) ಕುಸಿದಿದೆ. ಮೊಹರಂ ಹಬ್ಬವಾಗಿದ್ದರಿಂದ ಮನೆಯವರೆಲ್ಲ ಹೊರಗೆ ತೆರಳಿದ್ದ ವೇಳೆ ಘಟನೆ ಸಂಭವಿಸಿದೆ. ಮನೆಯಲ್ಲಿದ್ದ ಕೆಲವು ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ – ಬೀಗರ ಊಟದ ವೇಳೆ ಅಧಿಕಾರಿಗಳ ದಾಳಿ, ಮದುವೆ ಮಾಡಿಸಿದ ಹಲವರ ವಿರುದ್ಧ ಕೇಸ್, … Read more

BREAKING NEWS | ಶಿವಮೊಗ್ಗ ಪಾಲಿಕೆ ಮಾಜಿ ಸದಸ್ಯೆಯ ಮನೆ ಕುಸಿತ

Former-corporator-house-collapse-in-Sheshadripuram.

ಶಿವಮೊಗ್ಗ | ಭಾರಿ ಮಳೆಗೆ ಶಿವಮೊಗ್ಗದಲ್ಲಿ ಕಳೆದ ರಾತ್ರಿ ಮಾಜಿ ಕಾರ್ಪೊರೇಟರ್ ಒಬ್ಬರ ಮನೆ ಕುಸಿದಿದೆ. ಆದರೆ ಈತನಕ ಪಾಲಿಕೆಯ ಅಧಿಕಾರಿಗಳು, ಜನಪ್ರತಿನಿಧಿಗಳ್ಯಾರು ಅವರ ನೆರವಿಗೆ ಬಂದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ನಗರದ ಶೇಷಾದ್ರಿಪುರಂನ 2ನೇ ಅಡ್ಡರಸ್ತೆಯಲ್ಲಿ ನಾಲ್ಕು ಮನೆಗಳು ಕುಸಿದಿವೆ. ಅದೃಷ್ಟವಶಾತ್ ಯಾರಿಗೂ ಸಮಸ್ಯೆಯಾಗಿಲ್ಲ. ಮಾಜಿ ಕಾರ್ಪೊರೇಟರ್ ಮನೆ ಕುಸಿದ ನಾಲ್ಕು ಮನೆಗಳ ಪೈಕಿ ಒಂದು ಮನೆ ಮಾಜಿ ಕಾರ್ಪೊರೇಟರ್ ರಂಗಮ್ಮ ಹನುಮಂತಪ್ಪ ಅವರಿಗೆ ಸೇರಿದೆ. ಕಳೆದ ರಾತ್ರಿ ಮನೆ ಕುಸಿಯುತ್ತಿದ್ದಂತೆ ಮಾಜಿ … Read more

ಅರಲಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮೇಲೆ ಬಿದ್ದ ಮರ

sagara graphics

SHIVAMOGGA LIVE NEWS | 7 ಮಾರ್ಚ್ 2022 ಸರ್ಕಾರಿ ವಸತಿ ಗೃಹದ ಮೇಲೆ ಮರ ಉರುಳಿ, ಮನೆ ಮತ್ತು ಅದರ ಮುಂದೆ ನಿಲ್ಲಸಿದ್ದ ಬೈಕ್ ಸಂಪೂರ್ಣ ಹಾನಿಗೀಡಾಗಿವೆ. ಸಾಗರ ತಾಲೂಕು ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಆರೋಗ್ಯ ಸಹಾಯಕಿ ಗೌರಮ್ಮ ಅವರ ಸರ್ಕಾರಿ ವಸತಿಗೃಹದ ಮೇಲೆ ಮರ ಬಿದ್ದಿದೆ. ಮನೆಯಲ್ಲಿ ಇದ್ದವರಿಗೆ ಯಾವುದೆ ಸಮಸ್ಯೆ ಆಗಿಲ್ಲ. ಮರ ಬಿದ್ದಿದ್ದರಿಂದ ಮನೆ ನೆಲಸಮವಾಗಿದೆ. ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್’ಗೆ ಹಾನಿಯಾಗಿದೆ. ಇನ್ನು, ವಿಚಾರ … Read more

ಸೊರಬ, ಆನಂದಪುರದಲ್ಲಿ ಮನೆ ಗೋಡೆ ಕುಸಿತ, ಅದೃಷ್ಟವಶಾತ್ ತಪ್ಪಿತು ಭಾರಿ ಅನಾಹುತ

231121 House Wall Collapse at Soraba Ennekoppa

ಶಿವಮೊಗ್ಗ ಲೈವ್.ಕಾಂ | SORABA / ANANDAPURAM NEWS | 23 ನವೆಂಬರ್ 2021 ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮನೆಗಳ ಗೋಡೆ ಕುಸಿದು ಅನಾಹುತಗಳು ಸಂಭವಿಸುತ್ತಿವೆ. ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ. ಶಿವಪ್ಪ ಎಂಬುವವರಿಗೆ ಸೇರಿದ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಅಲ್ಲಿದ್ದ ವಸ್ತುಗಳು ಹಾನಿಯಾಗಿವೆ. ಗೋಡೆ ಕುಸಿತದಿಂದಾಗಿ ಮನೆಯ ಇತರೆಡೆ ಬಿರುಕು ಕಾಣಿಸಿಕೊಂಡಿದೆ. ಇದನ್ನೂ ಓದಿ | ಶಿವಮೊಗ್ಗದಲ್ಲಿ ದಿಢೀರ್ ಕುಸಿದ ಮನೆ, ಅದೃಷ್ಟವಶಾತ್ … Read more

ಶಿವಮೊಗ್ಗದಲ್ಲಿ ದಿಢೀರ್ ಕುಸಿದ ಮನೆ, ಅದೃಷ್ಟವಶಾತ್ ಪಾರಾಯ್ತು ಎರಡು ಕುಟುಂಬ

211121 House Collapse in Shimoga city

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ನವೆಂಬರ್ 2021 ಕಳೆದೊಂದು ವಾರದಿಂದ ಸುರಿದ ಭಾರಿ ಮಳೆ ಪರಿಣಾಮ ಶಿವಮೊಗ್ಗದಲ್ಲಿ ಮನೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲ ಹೊರೆಗೆ ಓಡಿ ಬಂದಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಶಿವಮೊಗ್ಗದ ಗೋಪಾಳ ಸಮೀಪ ವಿಕಾಸ ಶಾಲೆ ಬಳಿ ಹೆಂಚಿನ ಮನೆಯೊಂದರ ಗೋಡೆಗಳು ಕುಸಿದಿವೆ. ಬಸವರಾಜು ಎಂಬುವವರಿಗೆ ಸೇರಿದ ಮನೆ ಸಂಪೂರ್ಣ ಗೋಡೆಗಳು ಕುಸಿದಿವೆ. ಮೇಲ್ಛಾವಣಿ ಮುರಿದು ಬಿದ್ದಿದೆ. ಘಟನೆಯಲ್ಲಿ ಎರಡು ಕುಟಂಬಗಳು ಪ್ರಾಣಪಾಯದಿಂದ ಪಾರಾಗಿವೆ. ಹೇಗಾಯ್ತು … Read more

ಹೊಳೆಹೊನ್ನೂರು ಭಾಗದಲ್ಲಿ ಕೆಲವು ಮನೆಗಳ ಗೋಡೆ ಕುಸಿತ

191121 wall collapse around holehonnur due to rain

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 19 ನವೆಂಬರ್ 2021 ನಿರಂತರ ಮಳೆಯಿಂದಾಗಿ ಹೊಳೆಹೊನ್ನೂರು ಭಾಗದ ಕೆಲವು ಮನೆಗಳ ಗೋಡೆ ಕುಸಿದ ವರದಿಯಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಹತೊಳಲು, ಕೆರೆಬೀರನಹಳ್ಳಿ ಗ್ರಾಮದಲ್ಲಿ ಮನೆಗಳ ಗೋಡೆ ಕುಸಿದಿವೆ. ಅರಹತೊಳಲಿನಲ್ಲಿ ಎರಡು ಮನೆಗಳ ಗೋಡೆ ಕುಸಿದಿದೆ. ಪರಮೇಶ್ವರ್ ಎಂಬುವವರ ಮನೆ ಗೋಡೆ ಕುಸಿದು ಮನೆಯೊಳಗಿದ್ದ ವಸ್ತುಗಳ ಹಾನಿಯಾಗಿವೆ. ಇದನ್ನೂ ಓದಿ | ಶಿವಮೊಗ್ಗದಲ್ಲಿ ಮುಂದುವರೆದ ಮಳೆ, ಇವತ್ತಿಗೆ ಆರೆಂಜ್, ಇನ್ನೆರಡು ದಿನ ಯಲ್ಲೋ … Read more

ಭಾರಿ ಮಳೆಗೆ ಸಾಗರದಲ್ಲಿ ಧರೆ ಕುಸಿತ, ಎರಡು ಕಡೆ ಮನೆಗಳಿಗೆ ಹಾನಿ

160721 Sagara Arehada Rain Effect 1

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಭಾರಿ ಮಳೆಗೆ ಸಾಗರ ತಾಲೂಕಿನಲ್ಲಿ ಮನೆಯ ಗೋಡೆ ಮತ್ತು ಧರೆ ಕುಸಿದ ವರದಿಯಾಗಿದೆ. ತಾಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹದ ಗ್ರಾಮದಪ್ಪಿ ಭಾರಿ ಮಳೆಗೆ ತೋಟದ ಮೇಲಿನ ಧರೆ ಕುಸಿದಿದೆ. ಅರೆಹದ ಗ್ರಾಮದ ಸರ್ವೇ ನಂ. 72ರಲ್ಲಿ ಎಂ.ಆರ್.ಸುಬ್ಬರಾವ್ ಎಂಬುವವರಿಗೆ ಸೇರಿದ ಅಡಕೆ ತೋಟದ ಮೇಲ್ಬಾಗದ ಸುಮಾರು 30 ಅಡಿ ಎತ್ತರದ ಧರೆ ಕುಸಿದಿದ್ದು. ಅಡಕೆ ಮರಗಳು ಹಾನಿಯಾಗಿವೆ. ಸುಮಾರು 35 ಅಡಿಯಷ್ಟು … Read more

ಸಿಎಂ ಭೇಟಿಯಾದ ಪಾಲಿಕೆ ಕಾಂಗ್ರೆಸ್ ಸದಸ್ಯರು, ಬಾಕಿ ನಾಲ್ಕು ಲಕ್ಷ ಬಿಡುಗಡೆಗೆ ಆಗ್ರಹ

211020 Shimoga Palike Congress Members Meet CM Yedyurappa 1

ಶಿವಮೊಗ್ಗ ಲೈವ್.ಕಾಂ | SHIKARIPURA NEWS | 21 ಅಕ್ಟೋಬರ್ 2020 ಕಳೆದ ವರ್ಷ ಶಿವಮೊಗ್ಗದಲ್ಲಿ ಸುರಿದ ಭಾರಿ ಮಳೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ಬಾಕಿ ಇರುವ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಾಲಿಕೆ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಶಿಕಾರಿಪುರದಲ್ಲಿ ಸಿಎಂ ನಿವಾಸದಲ್ಲಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ನೆರೆ ಸಂದರ್ಭ ಸಿಎಂ ಶಿವಮೊಗ್ಗಕ್ಕೆ … Read more

ಕುಸಿಯಿತು ತೀರ್ಥಹಳ್ಳಿಯ ತುಂಬರಮನೆ ಸೇತುವೆ, ಜನರ ಆಕ್ರೋಶ, ಮಾಜಿ ಮಿನಿಸ್ಟರ್ ಸ್ಥಳಕ್ಕೆ ಭೇಟಿ

ಶಿವಮೊಗ್ಗ ಲೈವ್.ಕಾಂ | ತೀರ್ಥಹಳ್ಳಿ | 23 ಜುಲೈ 2019 ತೀರ್ಥಹಳ್ಳಿಯ ತುಂಬರಮನೆ ಸೇತುವೆ ಕುಸಿದಿದೆ. ಸೇತುವೆಯ ಒಂದು ಭಾಗದ ಸಂಪೂರ್ಣ ಕುಸಿದು, ದೊಡ್ಡ ಕಂದಕ ನಿರ್ಮಾಣವಾಗಿದೆ. ಇನ್ನು, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇವತ್ತು ಸೇತುವೆ ಕುಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಾಲ್ಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತುಂಬರಮನೆ ಸೇತುವೆ, ಕುಸಿಯುವ ಹಂತಕ್ಕೆ ತಲುಪಿತ್ತು. ಈ ಕುರಿತು ಸ್ಥಳೀಯರು ಹಲವು ಬಾರಿ ಆಡಳಿತಕ್ಕೆ ಮನವಿ ಮಾಡಿದ್ದರು. ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿತ್ತು. ಆದರೆ ಆಡಳಿತದ … Read more