ಗಾಂಧಿನಗರದ ಈ ಕಟ್ಟೆಯಿಂದ ಕಾದಿದೆ ಗಂಡಾಂತರ, ವಾಹನ ಸವಾರರೆ ಇಲ್ಲಿ ಬರುವಾಗ ಎಚ್ಚರ.. ಎಚ್ಚರ..!
ಶಿವಮೊಗ್ಗ ಲೈವ್.ಕಾಂ | SHIMOGA NEWS | 28 MARCH 2021 ಇಲ್ಲಿ ಪ್ರತಿ ತಿಂಗಳು ಮೂರ್ನಾಲ್ಕು ಅಪಘಾತ ಫಿಕ್ಸ್. ಎಲ್ಲಕ್ಕೂ ಕಾರಣ ಈ ಅವೈಜ್ಞಾನಿಕ ಕಾಂಕ್ರಿಟ್ ಕಟ್ಟೆ. ಇದು ಶಿವಮೊಗ್ಗದ ಗಾಂಧಿ ನಗರ ಸರ್ಕಲ್‍ನಲ್ಲಿರುವ ಕಾಂಕ್ರಿಟ್ ಕಟ್ಟೆ. ಸರ್ಕಲ್‍ನ ಮಧ್ಯದಲ್ಲೇ ಇದ್ದು, ಅತ್ಯಂತ ಕಡಿಮೆ ಎತ್ತರದ್ದಾಗಿರುವುದರಿಂದ ವಾಹನ ಸವಾರರಿಗೆ ದಿಢೀರನೆ ಈ ಕಟ್ಟೆ ಗೊತ್ತಾಗುವುದಿಲ್ಲ. ಇದೇ ಕಾರಣಕ್ಕೆ ವಾರಕ್ಕೊಂದಾದರೂ ಅಪಘಾತ ಸಂಭವಿಸುತ್ತಿದೆ. ಅಪರೂಪಕ್ಕೆ ಬಂದವರು ಅಪಘಾತಕ್ಕೀಡಾಗ್ತಾರೆ ಪ್ರತಿದಿನ ಈ ರಸ್ತೆಯಲ್ಲಿ ಓಡಾಡುವವರಿಗಷ್ಟೆ ಇಲ್ಲೊಂದು ಕಟ್ಟೆ ಇದೆ … Read more