ಜುಲೈ 6ರ ಶಿವಮೊಗ್ಗ ಕರೋನ ರಿಪೋರ್ಟ್ | ಹೆಚ್ಚಿದ ಸೋಂಕಿತರ ಸಂಖ್ಯೆ, ಸೀಲ್ ಡೌನ್ ಪ್ರದೇಶಗಳು ಏರಿಕೆ, ಎಷ್ಟಾಗಿದೆ ಗೊತ್ತಾ?

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA | 7 ಜುಲೈ 2020 ಶಿವಮೊಗ್ಗ ಜಿಲ್ಲೆಯಲ್ಲಿ ಕರೋನ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಸಮುದಾಯದ ಹಂತದಲ್ಲಿ ಸೋಂಕು ಹರಡುತ್ತಿದೆ. ಈ ಹಿನ್ನೆಯಲ್ಲಿ ಎಲ್ಲರೂ ಮುಂಜಾಗ್ರತೆ ವಹಿಸಬೇಕಿದೆ. ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವದರಿಂದ ಕರೋನ ವೈರಸ್ ಹರಡದಂತೆ ತಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ ಮುನ್ನೂರರ ಗಡಿಗೆ ಬಂದು ನಿಂತಿದೆ. ಇದು ತೀವ್ರ ಆತಂಕಕಾರಿಯಾಗಿದೆ. ಜುಲೈ 6ರಂದು ಸಂಗ್ರಹಿಸಿದ ಗಂಟಲು ದ್ರವ ಮಾದರಿ = 600 … Read more

ಸಾಗರದ ಲ್ಲಿ ಮೆಸ್ಕಾಂ ಜೆಇಗೆ ಕರೋನ, ಲಕ್ಷಣವಿಲ್ಲದಿದ್ದರೂ ಸೋಂಕು ಪ್ರತ್ಯಕ್ಷ

SAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | SAGARA NEWS | 6 ಜುಲೈ 2020 ಬಳ್ಳಾರಿಗೆ ಹೋಗಿ ಬಂದಿದ್ದ ಮೆಸ್ಕಾಂ ಸಹಾಯಕ ಅಭಿಯಂತರರೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡಿದೆ. 27 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಟ್ರಾವಲ್ ಹಿಸ್ಟರಿ ಇದ್ದ ಕಾರಣ ಇವರು ಕರೋನ ಪರೀಕ್ಷೆಗೆ ಒಳಪಟ್ಟಿದ್ದರು. ಯಾವುದೇ ಲಕ್ಷಣಗಳಿಲ್ಲದೆ ಇದ್ದರೂ ಮಹಿಳೆಯಲ್ಲಿ ಸೋಂಕು ಇರುವುದು ದೃಢವಾಗಿದೆ. ಕೂಡಲೇ ಮೆಸ್ಕಾಂ ಜೆಇಗೆ ಚಿಕಿತ್ಸೆ ಆರಂಭಿಸಲಾಗಿದೆ. ಮಾರ್ಕೆಟ್ ರಸ್ತೆಯ ಲಿಂಬು ಸರ್ಕಲ್ ಬಳಿ ಇವರು ವಾಸವಾಗಿದ್ದು. ಈಗ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 31 ಮಂದಿಗೆ ಕರೋನ ಪಾಸಿಟಿವ್

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಜುಲೈ 2020 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ದೊಡ್ಡ ಸಂಖ್ಯೆಯಲ್ಲಿ ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವತ್ತು ಒಟ್ಟು 31 ಮಂದಿಗೆ ಕರೋನ ಪಾಸಿಟಿವ್ ಬಂದಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. ಯಾರಿಗೆಲ್ಲ ಸೋಂಕು ತಗುಲಿದೆ? ಯಾರೂ ಡಿಸ್ಚಾರ್ಜ್ ಆಗಿಲ್ಲ..! ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 253ಕ್ಕೆ ಏರಿಕೆಯಾಗಿದೆ. ಈವರೆಗೆ 117 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 132 ಮಂದಿ … Read more

ಮತ್ತೊಬ್ಬ ಮೆಸ್ಕಾಂ ಲೈನ್ ಮನ್‌ಗೆ ಕರೋನ, ಕ್ವಾರ್ಟರ್ಸ್ ಸೀಲ್ ಡೌನ್, ಜನರಲ್ಲಿ ಆತಂಕ

ಶಿವಮೊಗ್ಗ ಲೈವ್.ಕಾಂ | SAGARA NEWS | 4 ಜುಲೈ 2020 ಸಾಗರದಲ್ಲಿ ಮೆಸ್ಕಾಂನ ಮತ್ತೊಬ್ಬ ಲೈನ್‌ ಮನ್‌ಗೆ ಕರೋನ ಸೋಂಕು ತಗುಲಿದೆ. ಇದರಿಂದ ಮೆಸ್ಕಾಂ ಕ್ವಾರ್ಟರ್ಸ್‌ ಸೀಲ್‌ ಡೌನ್‌ ಮಾಡಲಾಗಿದ್ದು, ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಸೋಂಕು ತಗುಲಿದ್ದು ಹೇಗೆ? ಎರಡು ದಿನದ ಹಿಂದೆ ಮೆಸ್ಕಾಂ ಲೈನ್‌ ಮನ್‌ ಒಬ್ಬರಿಗೆ ಸೋಂಕು ತಗುಲಿತ್ತು. ಈಗ ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಲೈನ್‌ ಮನ್‌ಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಗೆ ಸ್ಯಾನಿಟೈಸ್‌ ಮಾಡಲಾಗಿದೆ. ಕ್ವಾರ್ಟರ್ಸ್‌ ಸೀಲ್‌ … Read more

ಕರೊನ ಚಿಕಿತ್ಸೆಗೆ ಮೆಗ್ಗಾನ್‌ನಲ್ಲಿ 150, ಗಾಜನೂರಲ್ಲಿ 190, ಭದ್ರಾವತಿಯಲ್ಲಿ 50 ಬೆಡ್, 23 ಕೋವಿಡ್ ಕೇರ್ ಸೆಂಟರ್ ರೆಡಿ

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಜುಲೈ 2020 ಕರೋನ ಸೋಂಕಿತರ ಚಿಕಿತ್ಸೆಗೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಹಲವು ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯ ಸ್ಯಾಟಿಲೈಟ್‍ ಕ್ಯಾಂಪಸ್ ಸಜ್ಜು ಮೆಗ್ಗಾನ್‍ ಅಸ್ಪತ್ರೆಯಲ್ಲಿ ಪ್ರಸ್ತುತ 150 ಹಾಸಿಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಗಾಜನೂರಿನಲ್ಲಿ ಮೊರಾರ್ಜಿ ದೇಸಾಯಿ ಹಾಸ್ಟೆಲ್‍ನಲ್ಲಿ 190 ಬೆಡ್ ಹಾಗೂ ಭದ್ರಾವತಿ ವಿಎಸ್‍ಐಎಲ್‍ನಲ್ಲಿ 50 ಬೆಡ್ ಸೌಲಭ್ಯ ಸಜ್ಜುಗೊಳಿಸಲಾಗುತ್ತಿದೆ. 23 ಕೋವಿಡ್ ಕೇರ್ ಸೆಂಟರ್‍ಗಳನ್ನು ಗುರುತಿಸಲಾಗಿದೆ. … Read more

ಶಿವಮೊಗ್ಗ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 42 ಮಿ.ಮೀ ಮಳೆ, ಮೂರು ತಾಲೂಕಿನಲ್ಲಿ ಒಂದೇ ಒಂದು ಹನಿ ಮಳೆಯಾಗಿಲ್ಲ

Shivamogga-Rain-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಜೂನ್ 2020 ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 42.60 ಮಿಮಿ ಮಳೆಯಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮಿ ಇದ್ದು, ಇದುವರೆಗೆ ಸರಾಸರಿ  266.19 ಮಿಮಿ ಮಳೆ ದಾಖಲಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ 01.40 ಮಿಮಿ., ಭದ್ರಾವತಿ 0.00 ಮಿಮಿ., ತೀರ್ಥಹಳ್ಳಿ 28.60 ಮಿಮಿ., ಸಾಗರ 0.20 ಮಿಮಿ., ಶಿಕಾರಿಪುರ … Read more

ಶಿವಮೊಗ್ಗ ಗಾಂಧಿನಗರದ ಮತ್ತೊಂದು ರಸ್ತೆ ಸೀಲ್ ಡೌನ್, ಪಾಲಿಕೆಯಿಂದ ಸ್ಯಾನಿಟೈಸೇಷನ್ ಶುರು

300620 Gandhi Nagara B Block Sealdown 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಜೂನ್ 2020 ಗಾಂಧಿನಗರದ ಮತ್ತೊಂದು ರಸ್ತೆಯನ್ನು ಪಾಲಿಕೆ ಅಧಿಕಾರಿಗಳು ಇವತ್ತು ಸೀಲ್ ಡೌನ್ ಮಾಡಿದ್ದಾರೆ. ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ. ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ, ಗಾಂಧಿ ನಗರದ ಆರನೇ ತಿರುವಿನ ಬಿ ಬ್ಲಾಕ್‍ ರಸ್ತೆಯನ್ನು ಬಂದ್ ಮಾಡಲಾಗಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ರಸ್ತೆಯಲ್ಲಿ ಸ್ಯಾನಿಟೈಸೇಷನ್ ಮಾಡುತ್ತಿದ್ದಾರೆ. ಮನೆಯಿಂದ ಯಾರೂ ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಗಾಂಧಿನಗರದ ಬಿ ಬ್ಲಾಕ್‍ನ ಮುಖ್ಯರಸ್ತೆಯಲ್ಲೂ ಸೀಲ್ … Read more

ಶಿವಮೊಗ್ಗ ಸಿಟಿಯಲ್ಲಿ ಮುಂದುವರೆದ ಸೀಲ್ ಡೌನ್, ಇವತ್ತು ಮತ್ತೊಂದು ರಸ್ತೆಯ ನೂರು ಮೀಟರ್ ಬಂದ್

300620 Gandhi Nagara Seal Down in Sanitization 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಜೂನ್ 2020 ಶಿವಮೊಗ್ಗ ನಗರದಲ್ಲಿ ಇವತ್ತು ಇನ್ನೊಂದು ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ವ್ಯಕ್ತಿಯೊಬ್ಬರಲ್ಲಿ ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಬ್ಯಾರಿಕೇಡ್ ಹಾಕಿ ಸೀಲ್ ಡೌನ್ ಮಾಡಿದ್ದು, ರಸ್ತೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಗಾಂಧಿನಗರ ಬಿ ಬ್ಲಾಕ್‍ನ ಮುಖ್ಯ ರಸ್ತೆಯನ್ನು ಇವತ್ತು ಸೀಲ್ ಡೌನ್ ಮಾಡಲಾಯಿತು. ರಸ್ತೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಸೀಲ್ ಡೌನ್ ಪ್ರದೇಶದಲ್ಲಿ ಜನ ಮತ್ತು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸೀಲ್ … Read more

ಒಂದೇ ದಿನ ಶಿವಮೊಗ್ಗ ಸಿಟಿಯ ನಾಲ್ಕು ರಸ್ತೆಗಳು ಸೀಲ್ ಡೌನ್, ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ

290620 Rajendranagara first cross seal down 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 30 ಜೂನ್ 2020 ಶಿವಮೊಗ್ಗ ನಗರದಲ್ಲಿ ಸೋಮವಾರ ಒಂದೇ ದಿನ ನಾಲ್ಕು ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆ ರಸ್ತೆಗಳನ್ನು ಬಂದ್ ಮಾಡಿ ವಾಹನ ಮತ್ತು ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಐವರಿಗೆ ಕರೋನ ನಾಲ್ಕು ಸೀಲ್ ಡೌನ್ ಐದು ಮಂದಿಗೆ ಕರೋನ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಯಲ್ಲಿ ಈ ಸೀಲ್ ಡೌನ್ ಮಾಡಲಾಗಿದೆ. ರಾಜೇಂದ್ರನಗರದ ಮೊದಲ ಅಡ್ಡರಸ್ತೆ, ಕೆ.ಆರ್.ಪುರ, ಜೆಎಸ್‍ಕೆಎಂ ರಸ್ತೆ ಸಮೀಪದ ಪಿಡಬ್ಲುಡಿ ಕ್ವಾರ್ಟರ್ಸ್ … Read more

ಶಿವಮೊಗ್ಗದ ಬಸವನಗುಡಿಯಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿಗೆ ಕರೋನ, ನೂರು ಮೀಟರ್ ಸೀಲ್ ಡೌನ್

Corona PPE Kit and swab box

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಜೂನ್ 2020 ಶಿವಮೊಗ್ಗದ ಬಸವನಗುಡಿಯಲ್ಲಿ ವಾಸವಾಗಿರುವ ಒಂದೇ ಕುಟುಂಬದ ನಾಲ್ವರಿಗೆ ಕರೋನ ಸೋಂಕು ಕಾಣಿಸಿಕೊಂಡಿದೆ. ಶೀತ, ಜ್ವರದಿಂದ ಬಳಲುತ್ತಿದ್ದರು ಈ ಕುಟುಂಬ ಶೀತ, ಜ್ವರದಿಂದ ಬಳಲುತ್ತಿತ್ತು. ಹಾಗಾಗಿ ಇವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಇವರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಕುಟುಂಬದ 80 ವರ್ಷದ ವೃದ್ಧೆ, 56 ವರ್ಷದ ಪುರುಷ, 21 ವರ್ಷ ಮತ್ತು 20 ವರ್ಷದ ಯುವತಿಗೆ ಸೋಂಕು ತಗುಲಿದೆ. ಬಸವನಗುಡಿಯಲ್ಲಿ … Read more