ಹಸೆಮಣೆ ಏರಬೇಕಿದ್ದ ಜೋಡಿ ಅಪಘಾತದಲ್ಲಿ ಸಾವು, ಹೇಗಾಯ್ತು ಘಟನೆ?

couple-succumbed-in-a-mishap-at-Shikaripura

ಶಿಕಾರಿಪುರ: ಬೈಕ್‌ ಮತ್ತು ಕಾರು ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಜೋಡಿ (Couple) ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ತಾಲೂಕಿನ ಮಟ್ಟಿಕೋಟೆಯ ರೇಖಾ (20), ತೊಗರ್ಸಿ ಸಮೀಪದ ಗಂಗೊಳ್ಳಿಯ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ಪಟ್ಟಣದಲ್ಲಿರುವ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರನ್ನು ಕರೆ ತರುತ್ತಿದ್ದ ಕಾರು ಡಿಕ್ಕಿ ಹೊಡೆದಾಗ ಬೈಕ್ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ.  ಕಳೆದ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥ ನಡೆದಿತ್ತು. ಮಳೆಯ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು, ಡಿಸೆಂಬರ್‌ನಲ್ಲಿ ಮದುವೆಗೆ … Read more