ಮಾಸ್ಕ್ ಧರಿಸದವರಿಗೆ ಶಿವಮೊಗ್ಗ ಪೊಲೀಸರಿಂದ ದಂಡದ ಬಿಸಿ, ಎಷ್ಟು ಕೇಸ್ ದಾಖಲಿಸಲಾಗಿದೆ? ವಿಧಿಸಲಾದ ದಂಡವೆಷ್ಟು?
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಸೆಪ್ಟಂಬರ್ 2020 ಕರೋನ ವ್ಯಾಪಕವಾಗಿ ಹರಡುತ್ತಿದೆ. ಹಾಗಿದ್ದೂ ಮಾಸ್ಕ್ ಧರಿಸದೆ ಓಡಾಡುವವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ದಂಡ ಹಾಕುತ್ತಿದ್ದಾರೆ. ಜಿಲ್ಲೆಯಾದ್ಯಂತ ಹಲವು ಕಡೆ ದಿಢೀರ್ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹಲವರಿಗೆ ದಂಡ ಹಾಕಿದ್ದಾರೆ. ಸೆಪ್ಟೆಂಬರ್ 24 ಮತ್ತು 25ರಂದು ಕಾರ್ಯಾಚರಣೆ ನಡೆಸಿ ಒಟ್ಟು 1225 ಪ್ರಕರಣ ದಾಖಲಿಸಿ, 1,84,600 ರೂ. ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸೆಪ್ಟೆಂಬರ್ 24ರಂದು 477 ಪ್ರಕರಣ ದಾಖಲಿಸಿ, 81,400 … Read more