ಚಕ್ರಾ ವ್ಯಾಪ್ತಿಯಲ್ಲಿ ದಾಖಲೆ ಮಳೆ, ಮಾಸ್ತಿಕಟ್ಟೆಯಲ್ಲೂ ಜೋರು, 24 ಗಂಟೆಯಲ್ಲಿ ಹೊಸನಗರ ತಾಲೂಕಿನಲ್ಲಿ ಎಷ್ಟಾಯ್ತು ಮಳೆ?

rain in shimoga

ಶಿವಮೊಗ್ಗ ಲೈವ್.ಕಾಂ | HOSANGARA NEWS | 24 ಜುಲೈ 2021 ಹೊಸನಗರ ತಾಲೂಕು ಚಕ್ರಾ ಜಲಾಶಯ ವ್ಯಾಪ್ತಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದೆ. ಇದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ದಾಖಲಾಗಿದೆ. ತಾಲೂಕಿನಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 175.6 ಮಿ.ಮೀ ಮಳೆಯಾಗಿದೆ. ಮಾಣಿ ವ್ಯಾಪ್ತಿಯಲ್ಲಿ 135 ಮಿ.ಮೀ, ಯಡೂರಿನಲ್ಲಿ 162 ಮಿ.ಮೀ, ಹುಲಿಕಲ್‍ನಲ್ಲಿ 122 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 215 ಮಿ.ಮೀ, ಚಕ್ರಾ ವ್ಯಾಪ್ತಿಯಲ್ಲಿ 401 ಮಿ.ಮೀ, ಸಾವೇಹಕ್ಕಲು 308 ಮಿ.ಮೀ ಮಳೆಯಾಗಿದೆ. ಇದನ್ನೂ ಓದಿ … Read more

ಹಳೆ ಶಿವಮೊಗ್ಗಕ್ಕೆ ನುಗ್ಗಿತು ತುಂಗಾ ನದಿ ನೀರು, ಎಲ್ಲೆಲ್ಲಿ ಹಾನಿಯಾಗಿದೆ?

240721 Rajiv Gandhi Badavane Drowned in Rain Water 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021 ಹಳೆ ಶಿವಮೊಗ್ಗ ಭಾಗ ಮತ್ತೆ ಜಲಾವೃತವಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯಿಂದ ನೀರು ಬಡಾವಣೆಗಳಿಗೆ ನುಗ್ಗಿದೆ. ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ. ಎಲ್ಲೆಲ್ಲಿ ನೀರು ನುಗ್ಗಿದೆ? ತುಂಗಾ ನದಿ ತೀರದಲ್ಲಿರುವ ಕುಂಬಾರ ಬೀದಿ, ಸೀಗೆಹಟ್ಟಿ, ಕೆ.ಆರ್‍.ಪುರಂ ರಸ್ತೆಯ ಸ್ವಲ್ಪ ಭಾಗ, ವಿದ್ಯಾನಗರ, ಜಗದಂಬ ಬೀದಿ, ಕಂಟ್ರಿ ಕ್ಲಬ್‍, ರಾಜೀವ್ ಗಾಂಧಿ ಬಡಾವಣೆ, ಆರ್‍.ಟಿ.ಲೇಔಟ್, ಚಿಕ್ಕಲ್‍ನ ಶಾಂತಮ್ಮ ಲೇಔಟ್‍ ಮತ್ತು ಸುತ್ತಮುತ್ತಲ … Read more

ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಮೂರೂವರೆ ಅಡಿ ಹೆಚ್ಚಳ, ತುಂಗಾ ಜಲಾಶಯದ ಹೊರಹರಿವು ಎಷ್ಟಿದೆ ಗೊತ್ತಾ?

230721 Tunga Dam Outflow Increases 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಜುಲೈ 2021 ಜೋರು ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈಗಾಗಲೇ ಭರ್ತಿಯಾಗಿರುವುದರಿಂದ ತುಂಗಾ ಜಲಾಶಯದ ಒಳ ಹರಿವಿನ ಪ್ರಮಾಣದಷ್ಟೆ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳಹರಿವು? ಲಿಂಗನಮಕ್ಕಿ ಡ್ಯಾಂಗೆ 1,03,117 ಕ್ಯೂಸೆಕ್‍ ಒಳ ಹರಿವು ಇದೆ. ಶುಕ್ರವಾರ ಭಾರಿ ಪ್ರಮಾಣದ ನೀರು ಹರಿದು ಬಂದಿರುವುದರಿಂದ ಜಲಾಶಯದ ನೀರಿನ ಮಟ್ಟ 1802.60 ಕ್ಯೂಸೆಕ್‍ಗೆ ಏರಿಕೆಯಾಗಿದೆ. ಒಂದೇ … Read more

ಲಿಂಗನಮಕ್ಕಿಗೆ 14 ಗಂಟೆಯಲ್ಲಿ ದಾಖಲೆ ಮಟ್ಟದ ನೀರು, ಕೆಪಿಸಿಯಿಂದ ಮುನ್ನೆಚ್ಚರಿಕೆ ಪ್ರಕಟ

Linganamakki-Dam-General-Image

ಶಿವಮೊಗ್ಗ ಲೈವ್.ಕಾಂ | SAGARA NEWS | 24 ಜುಲೈ 2021 ಭಾರಿ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯಕ್ಕೆ ದೊಡ್ಡ ಪ್ರಮಾಣದಲ್ಲಿ ಒಳ ಹರಿವು ದಾಖಲಾಗಿದೆ. 14 ಗಂಟೆ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ನಡುವೆ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸಂದೇಶ ಬಿಡುಗಡೆ ಮಾಡಲಾಗಿದೆ. ಶರಾವತಿ ಕೊಳ್ಳದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯಕ್ಕೆ ಇವತ್ತು ಲಕ್ಷ ಕ್ಯೂಸೆಕ್‍ಗೂ ಅಧಿಕ ನೀರು ಹರಿದು ಬಂದಿದೆ. ನೀರಿನ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗಿದೆ. … Read more

ಗಾಜನೂರು ಬಳಿ ರಸ್ತೆಗೆ ಬಂತು ತುಂಗಾ ನದಿ ನೀರು, ತೋಟ, ಗದ್ದೆಗಳು ಜಲಾವೃತ

230721 Gajanur Water On Road 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಗಾಜನೂರು ಸಮೀಪ ತುಂಗಾ ನದಿ ನೀರು ರಸ್ತೆಗೆ ನುಗ್ಗಿದೆ. ಇದರಿಂದ ರಸ್ತೆ ಸಂಚಾರ ಕೆಲಕಾಲ ವ್ಯತ್ಯಯವಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಕಷ್ಟಪಡಬೇಕಾಯಿತು. ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದ ಸಮೀಪದಲ್ಲೇ ಹೊಳೆಯಿಂದ ನೀರು ರಸ್ತೆಗೆ ಬಂದಿದೆ. ಇಲ್ಲಿನ ತೋಟ, ಗದ್ದೆಗೆ ನೀರು ನುಗ್ಗಿದೆ. ಹಾಗಾಗಿ ಸುತ್ತಮುತ್ತಲ ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ. ಇನ್ನು, ಗಾಜನೂರು ಕಡೆಯಿಂದ … Read more

BREAKING NEWS | ತುಂಗಾ ಜಲಾಶಯದ ಹೊರ ಹರಿವು ಮತ್ತಷ್ಟು ಹೆಚ್ಚಳ, ನದಿ ಪಾತ್ರದ ಜನರಿಗೆ ಮುಳುಗಡೆ ಭಯ

230721 Tunga Dam Outflow Increases 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ತುಂಗಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಗೆ ಬಿಡಲು ತೀರ್ಮಾನಿಸಲಾಗಿದೆ. ಜಲಾಶಯದ ಕ್ರಸ್ಟ್ ಗೇಟ್‍ಗಳ ಮೂಲಕ 70 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಹೊತ್ತಿನಿಂದಲೇ ಜಲಾಶಯದಿಂದ ಈ ಪ್ರಮಾಣದ ನೀರನ್ನು ಹೊಳೆಗೆ ಬಿಡಲಾಗುತ್ತದೆ ಎಂದು ತುಂಗಾ ಮೇಲ್ದಂಡೆ ಯೋಜನೆ ಎಇಇ ತಿಳಿಸಿದ್ದಾರೆ. ಹೆಚ್ಚಿನ ಪ್ರಮಾಣದ ನೀರನ್ನು ಡ್ಯಾಂನಿಂದ ಹೊರಗೆ ಬಿಡುತ್ತಿರುವುದರಿಂದ ತುಂಗಾ … Read more

ಮುಳುಗಿತು ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪ

230721 Shimoga Korpalaya Mantapa Drowned 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಶಿವಮೊಗ್ಗದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣ ಮುಳುಗಿದೆ. ಎರಡು ದಿನದಿಂದ ಭಾರಿ ಮಳೆಯಾಗುತ್ತಿದ್ದಂತೆ ತುಂಗಾ ಜಲಾಶಯದ ಒಳ, ಹೊರ ಹರಿವು ಹೆಚ್ಚಳವಾಗುತ್ತಿದೆ. ರಾತ್ರಿಯಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಹಾಗಾಗಿ ಕೋರ್ಪಲಯ್ಯ ಛತ್ರ ಮಂಟಪ ಮುಳುಗಡೆಯಾಗಿದೆ. ಮಂಟಪ ಮುಳುಗಡೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಹಲವರು … Read more

ಲಿಂಗನಮಕ್ಕಿ ಜಲಾಶಯಕ್ಕೆ ಲಕ್ಷ ಲಕ್ಷ ಕ್ಯೂಸೆಕ್ ಒಳಹರಿವು, ತುಂಗಾ ಡ್ಯಾಂ ಹೊರ ಹರಿವು ಇನ್ನಷ್ಟು ಏರಿಕೆ

140621 Tunga Dam water outflow from 21 gates 1

ಶಿವಮೊಗ್ಗ ಲೈವ್.ಕಾಂ | SAGARA / SHIMOGA NEWS | 23 ಜುಲೈ 2021 ಮಳೆ ಹೆಚ್ಚಳವಾದಂತೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಗಂಟೆ ಗಂಟೆಗೂ ಹೆಚ್ಚಳವಾಗುತ್ತಿದೆ. ಇತ್ತ ತುಂಗಾ ಡ್ಯಾಂನಿಂದ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಬೆಳಗ್ಗೆ 8 ಗಂಟೆ ಹೊತ್ತಿಗೆ 73,431 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಬೆಳಗ್ಗೆ 10 ಗಂಟೆಗೆ 1,51,000 ಕ್ಯೂಸೆಕ್ ಒಳ ಹರಿವು ಇತ್ತು. ಮಧ್ಯಾಹ್ನ 12 ಗಂಟೆ ವೇಳೆಗೆ 2,42,000 ಕ್ಯೂಸೆಕ್ ಒಳಹರಿವು ಇದೆ. ಇದರಿಂದ … Read more

24 ಗಂಟೆಯಲ್ಲಿ ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಮಟ್ಟ ಮೂರು ಅಡಿ ಹೆಚ್ಚಳ, ತುಂಗಾ ಡ್ಯಾಂನಿಂದ ಹೊರಹರಿವು ನಿರಂತರ

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಕಳೆದ ಎರಡು ದಿನದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಹಳ್ಳ, ಕೊಳ್ಳಗಳು ತುಂಬಿಕೊಳ್ಳುತ್ತಿವೆ. ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೂ ಒಳ ಹರಿವು ಹೆಚ್ಚಳವಾಗಿದೆ. ಮೂರು ಅಡಿ ಏರಿದ ಲಿಂಗನಮಕ್ಕಿ ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ಗುರುವಾರ ನೀರಿನ ಮಟ್ಟ 1796 ಅಡಿಯಷ್ಟು ಇತ್ತು. ಇವತ್ತು 1799.15 ಅಡಿಗೆ ಏರಿಕೆಯಾಗಿದೆ. ಲಿಂಗನಮಕ್ಕಿಗೆ 73,431 ಕ್ಯೂಸೆಕ್ ಒಳಹರಿವು … Read more

ಗಂಟೆ ಗಂಟೆಗೂ ಹೆಚ್ಚಾಗ್ತಿದೆ ಗಾಜನೂರು ತುಂಗಾ ಜಲಾಶಯದ ಹೊರ ಹರಿವು

140621 Tunga Dam water outflow from 21 gates 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯದಿಂದ ಗಂಟೆ ಗಂಟೆಗೂ ಹೆಚ್ಚು ನೀರನ್ನು ಹೊರಗೆ ಬಿಡಲಾಗುತ್ತಿದೆ. ರಾತ್ರಿ 10 ಗಂಟೆಯಿಂದ ತುಂಗಾ ಡ್ಯಾಂನಿಂದ 56,500 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದರೆ ಮಳೆ ಹೆಚ್ಚಳವಾದ ಹಿನ್ನೆಲೆ ಹೊರ ಹರಿವು ಪ್ರಮಾಣ ಏರಿಕೆಯಾಗಲಿದೆ. ರಾತ್ರಿ 12 ಗಂಟೆಗೆ 61,500 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊಳೆಗೆ ಬಿಡಲು ತೀರ್ಮಾನಿಸಲಾಗಿದೆ. ಇವತ್ತು ಬೆಳಗ್ಗೆಯಿಂದ 41 ಸಾವಿರ ಕ್ಯೂಸೆಕ್‍ ಹೊರಹರಿವು … Read more