ಗಾಜನೂರು ಬಳಿ ರಸ್ತೆಗೆ ಬಂತು ತುಂಗಾ ನದಿ ನೀರು, ತೋಟ, ಗದ್ದೆಗಳು ಜಲಾವೃತ

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಗಾಜನೂರು ಸಮೀಪ ತುಂಗಾ ನದಿ ನೀರು ರಸ್ತೆಗೆ ನುಗ್ಗಿದೆ. ಇದರಿಂದ ರಸ್ತೆ ಸಂಚಾರ ಕೆಲಕಾಲ ವ್ಯತ್ಯಯವಾಗಿತ್ತು. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಕಷ್ಟಪಡಬೇಕಾಯಿತು.

ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಜಲಾಶಯದ ಸಮೀಪದಲ್ಲೇ ಹೊಳೆಯಿಂದ ನೀರು ರಸ್ತೆಗೆ ಬಂದಿದೆ. ಇಲ್ಲಿನ ತೋಟ, ಗದ್ದೆಗೆ ನೀರು ನುಗ್ಗಿದೆ. ಹಾಗಾಗಿ ಸುತ್ತಮುತ್ತಲ ರೈತರು ಬೆಳೆ ನಷ್ಟದ ಭೀತಿಯಲ್ಲಿದ್ದಾರೆ.

Nanjappa Hospital Advertisement

ಇನ್ನು, ಗಾಜನೂರು ಕಡೆಯಿಂದ ಶಿವಮೊಗ್ಗಕ್ಕೆ ಮತ್ತು ಶಿವಮೊಗ್ಗದಿಂದ ಗಾಜನೂರು ಕಡೆಗೆ ತೆರವಳು ವಾಹನಗಳು ಈ ಭಾಗದಲ್ಲಿ ನಿಧಾನವಾಗಿ ಚಲಿಸುವಂತಾಗಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment