ಶಿವಮೊಗ್ಗ ಡೈರಿ ಬಳಿ ಅಪಘಾತ, ಮೃತ ಯುವಕರ ಗುರುತು ಪತ್ತೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ನವೆಂಬರ್ 2021 ಶಿವಮೊಗ್ಗದ ಮಾಚೇನಹಳ್ಳಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದ ಯುವಕರ ಗುರುತು ಪತ್ತೆಯಾಗಿದೆ. ಇಬ್ಬರೂ ಭದ್ರಾವತಿ ತಾಲೂಕು ಜಯಂತಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಾಚೇನಹಳ್ಳಿಯಲ್ಲಿ ಇವತ್ತು ಬೆಳಗ್ಗೆ ಕೆಎಸ್ಆರ್’ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತರನ್ನು ಜಯಂತಿ ಗ್ರಾಮದ ಅಂಥೋಣಿ (34) ಮತ್ತು ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಗ್ರಾಮದ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ … Read more