ಸಿಎಂ ಯಡಿಯೂರಪ್ಪಗೆ ಟೈಮ್ ಕೊಡುತ್ತಿಲ್ಲ ಮೋದಿ, ಕಾರು ಬಿಟ್ಟು ಕೆಳಗಿಳಿಯುತ್ತಿಲ್ಲ ಈಶ್ವರಪ್ಪ, ಕಾಂಗ್ರೆಸ್ ಆಕ್ರೋಶ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 26 ಸೆಪ್ಟೆಂಬರ್ 2019 ಅತಿವೃಷ್ಟಿ ಕುರಿತು ಪರಿಶೀಲನಾ ಸಭೆ ನಡೆಸಬೇಕಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾರು ಬಿಟ್ಟು ಕಳೆಗಿಳಿಯುತ್ತಿಲ್ಲ. ಕಂದಾಯ ಸಚಿವರು ಚಿಕ್ಕಮಗಳೂರು ಬಿಟ್ಟು ಬೇರಾವ ಜಿಲ್ಲೆಗು ತೆರಳಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ದಿವಾಕರ್ ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ದಿವಾಕರ್, ಅತಿವೃಷ್ಟಿ ಸಂದರ್ಭವನ್ನು ನಿಭಾಯಿಸುವ ಪ್ರಮುಖ ಜವಾಬ್ದಾರಿ ಗ್ರಾಮೀಣಾಭಿವೃದ್ಧಿ ಮತ್ತು ಕಂದಾಯ ಇಲಾಖೆಗಳ ಮೇಲಿರುತ್ತದೆ. ಆದರೆ ಗ್ರಾಮೀಣಾಭಿವೃದ್ದಿ ಸಚಿವರು ಕಾರು ಬಿಟ್ಟು ಕೆಳಗಿಳಿಯುವುದಿಲ್ಲ ಅನ್ನುವುದಕ್ಕೆ ಬೆಳಗಾವಿಯಲ್ಲಿ ಆದ … Read more