‘ಗೀತಾ ಶಿವರಾಜ್‌ ಕುಮಾರ್‌ ಗೆಲ್ತಾರೆ’, ಟ್ರಾಕ್ಟರ್‌ ಪಣಕ್ಕಿಟ್ಟು ಶಿಕಾರಿಪುರದ ರೈತನ ಓಪನ್‌ ಚಾಲೆಂಜ್‌

Shikaripura-Kalmane-Farmer-raveendra-challene.

SHIVAMOGGA LIVE NEWS | 12 MAY 2024 SHIMOGA : ಲೋಕಸಭೆ ಚುನಾವಣೆ ಮತದಾನ ಮುಗಿದಿದ್ದು ಸೋಲು, ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಈ ಮಧ್ಯೆ ಓಪನ್‌ ಚಾಲೆಂಜ್‌ಗಳು ಶುರುವಾಗಿವೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಗೆಲ್ಲಲಿದ್ದಾರೆ ಎಂದು ರೈತನೊಬ್ಬ ಸವಾಲು ಹಾಕಿದ್ದಾನೆ. ತನ್ನ ಟ್ರಾಕ್ಟರ್‌ ಅನ್ನು ಪಣಕ್ಕಿಟ್ಟಿದ್ದಾನೆ. ಇದರ ವಿಡಿಯೋ ಈಗ ವೈರಲ್‌ ಆಗಿದೆ. ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರವೀಂದ್ರ ಎಂಬುವವರು ತಮ್ಮ ಟ್ರಾಕ್ಟರ್‌ ಪಣಕ್ಕಿಟ್ಟು ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ. … Read more

ಫೆ.27ರಂದು ಗ್ರಾಮ, ತಾಲೂಕು ಬಂದ್‌ಗೆ ಕರೆ, ಶಿವಮೊಗ್ಗದಲ್ಲಿ ಹೇಗಿರುತ್ತೆ ಹೋರಾಟ?

KT-Gangadhar-Farmer-Leader

SHIVAMOGGA LIVE NEWS | 21 FEBRUARY 2024 SHIMOGA : ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಫೆ.27ರಂದು ಗ್ರಾಮ ಹಾಗೂ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 11ಕ್ಕೆ ಮಲವಗೊಪ್ಪದ ಕಾಡಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡ ಕೆ.ಟಿ.ಗಂಗಾಧ‌ರ್ ತಿಳಿಸಿದರು. ರೈತರ ಹಕ್ಕುಗಳಿಗಾಗಿ ದೆಹಲಿ ಗಡಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರ್ಕಾರ ರೈತರ ಆಗ್ರಹಕ್ಕೆ … Read more

ಜ.4ರಂದು ಕರಾಳ ದಿನ ಆಚರಣೆ, ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ

Dinesh-Shiravala-Press-meet-in-Sagara.

SHIVAMOGGA LIVE NEWS | 2 JANUARY 2023 SAGARA : ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಬೇಸತ್ತು ರೈತ ಸಂಘದ ಸಂಸ್ಥಾಪನಾ ದಿನದಂದು ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ. ಜನವರಿ 4ರಂದು ರೈತರು ಕಪ್ಪು ಪಟ್ಟಿ ಧರಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್‌ ಶಿರವಾಳ ತಿಳಿಸಿದರು. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಶಿರವಾಳ, ರೈತರು ಮತ್ತು ರೈತ ಸಂಘವನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಯಾವುದೆ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸರ್ಕಾರ, ಜನಪ್ರತಿನಿಧಿಗಳು ಮತ್ತು … Read more

ಸಾಲ ಬಾಧೆ, ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಕೊನೆಯುಸಿರು

Thirrthahalli Taluk Graphics

SHIVAMOGGA LIVE NEWS | 20 OCTOBER 2023 THIRTHAHALLI : ಸಾಲ ಬಾಧೆಗೆ ರೈತರೊಬ್ಬರು (Farmer) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಟೂರುಕಟ್ಟೆ ಸಮೀಪದ ದಂಡಿನಕೊಡಿಗೆ ಗ್ರಾಮದ ನಾರಾಯಣ ಪೂಜಾರಿ (67) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ಬೆಳಗ್ಗೆ ಮನೆಯಲ್ಲಿ ವಿಷ ಸೇವಿಸಿ ನಾರಾಯಣ ಪೂಜಾರಿ ಅಸ್ವಸ್ಥರಾಗಿದ್ದರು. ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ … Read more

ಚೋರಡಿ ಸುತ್ತಮುತ್ತ ಕಾಡಾನೆ ಪ್ರತ್ಯಕ್ಷ, ತೋಟ, ಗದ್ದೆಯಲ್ಲಿ ಸಂಚಾರ, ಬೆಳೆ ನಷ್ಟದಿಂದ ಕಂಗಾಲದ ರೈತ

191023-Elephant-enters-agriculture-fields-near-choradi.webp

SHIVAMOGGA LIVE NEWS | 19 OCTOBER 2023 SHIMOGA : ಚೋರಡಿ ಸಮೀಪದ ಕೆಂಚನಾಳ, ಹೊರಬೈಲು ಸುತ್ತಮುತ್ತ ಕಾಡಾನೆಗಳು ಗದ್ದೆ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಳೆ ಹಾನಿ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಎಲ್ಲೆಲ್ಲಿ ದಾಳಿ ಮಾಡಿವೆ? ಎರಡು ದಿನದ ಹಿಂದೆ ಕೆಂಚನಾಳ ಸಮೀಪದ ಗಾಳಿಬೈಲಿನಲ್ಲಿ ಮೂರು ಆನೆಗಳು ಗದ್ದೆ ಮತ್ತು ತೋಟಕ್ಕೆ ನುಗ್ಗಿ ಭತ್ತ, ಅಡಿಕೆ, ಬಾಳೆ ಹಾಳು ಮಾಡಿವೆ. ಹೊರಬೈಲಲ್ಲಿ … Read more

ಬೆಳಗೆದ್ದು ಮನೆಯಿಂದ ಹೊರ ಬಂದು ನೋಡಿದ ರೈತನಿಗೆ ಕಾದಿತ್ತು ಶಾಕ್

041023-Areca-Theft-at-Mallapura-near-Holehonnuru.

SHIVAMOGGA LIVE NEWS | 4 OCTOBER 2023 HOLEHONNURU: ಮನೆ ಎದುರು ಒಣಗಿಸಲು ಹಾಕಿದ್ದ ಅಡಿಕೆ (Adike) ಕಳ್ಳತನವಾಗಿದೆ. ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಶಿವಾನಂದಪ್ಪ ಎಂಬುವವರು ತಮ್ಮ ಮನೆ ಮುಂದೆ ಕಣದಲ್ಲಿ ಅಡಿಕೆ (Adike) ಒಣಗಿಸಲು ಹಾಕಿದ್ದರು. ಸೋಮವಾರ ಬೆಳಗ್ಗೆ ಅಡಿಕೆಗೆ ಹೊದಿಸಲಾಗಿದ್ದ ಟಾರ್ಪಲ್‌ ಹರಿದಿರುವುದು ಗಮನಿಸಿದ್ದಾರೆ. ಪರಿಶೀಲಿಸಿದಾಗ ಸುಮಾರು 1.5 ಲಕ್ಷ ರೂ. ಮೌಲ್ಯದ 3 ಕ್ವಿಂಟಾಲ್‌ ಅಡಿಕೆ ಕಳ್ಳತನವಾಗಿತ್ತು. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ವಿಷ ಸೇವಿಸಿ ಶಿಕಾರಿಪುರದಲ್ಲಿ ರೈತ ಆತ್ಮಹತ್ಯೆ

SHIKARIPURA-TALUK-NEWS-1.jpg

SHIVAMOGGA LIVE NEWS | 28 SEPTEMBER 2023 SHIKARIPURA : ಸಾಲಬಾಧೆಯಿಂದ ಮನನೊಂದು ರೈತರೊಬ್ಬರು (Farmer) ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ಅರಳಿಹಳ್ಳಿ ಗ್ರಾಮದ ಮಂಜಪ್ಪ (58) ಮೃತ ರೈತ. ಗ್ರಾಮದಲ್ಲಿ ಎರಡೂವರೆ ಎಕರೆ ಜಮೀನು ಹೊಂದಿದ್ದರು. ಕೃಷಿ ಚಟುವಟಿಕೆಗಾಗಿ ವಿವಿಧೆಡೆ ಸಾಲ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಸೆ.26ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ನ್ಯಾಮತಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. … Read more

ಶಿಕಾರಿಪುರದಲ್ಲಿ ನೇಣು ಬಿಗಿದು ರೈತ ಆತ್ಮಹತ್ಯೆ

SHIKARIPURA-TALUK-NEWS-1.jpg

SHIVAMOGGA LIVE NEWS | 20 SEPTEMBER 2023 SHIKARIPURA : ಸಾಲಬಾಧೆಯಿಂದ (Loan) ಮನನೊಂದು ರೈತರೊಬ್ಬರು (Farmer) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ತಾಲೂಕು ತರಲಘಟ್ಟ ಗ್ರಾಮದ ಪರಮೇಶಪ್ಪ (47) ಮೃತ ರೈತ. ಕೃಷಿ ಚಟುವಟಿಕೆಗಾಗಿ ವಿವಿಧ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳಿಂದ ಸಾಲ ಮಾಡಿದ್ದರು. ಬರದ ಹಿನ್ನೆಲೆ ಸಾಲ ತೀರಿಸಲಾಗಿದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ಶಿಕಾರಿಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ – ಸೈಲೆನ್ಸರ್‌ಗಳನ್ನು ಸಾಲಾಗಿರಿಸಿ ರೋಡ್‌ ರೋಲರ್‌ ಹತ್ತಿಸಿದ ಪೊಲೀಸರು

ವಿಷ ಸೇವಿಸಿದ್ದ ರೈತ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕೊನೆಯುಸಿರು

crime name image

SHIVAMOGGA LIVE NEWS | 14 SEPTEMBER 2023 RIPPONPETE : ಸಾಲ ಬಾಧೆ ತಾಳಲಾರದೆ ರೈತರೊಬ್ಬರು (Farmer) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ರಿಗೆ ಗ್ರಾಮದ ಕೃಷಿಕ ಕೃಷ್ಣಮೂರ್ತಿ (60) ಆತ್ಮಹತ್ಯೆ ಮಾಡಿಕೊಂಡವರು. ಸೆ. 10ರಂದು ಮನೆಯಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭತ್ತ, ಕಬ್ಬು, ಶುಂಠಿ ಹಾಗೂ ಅಡಿಕೆ ಬೆಳೆಗಾಗಿ ಬ್ಯಾಂಕ್‌ ಮತ್ತು … Read more

ಭತ್ತ, ಹೆಚ್ಚು ನೀರು ಬೇಡುವ ಬೆಳೆ ಬೆಳೆಯದಂತೆ ರೈತರಿಗೆ ಸೂಚನೆ, ಕಾರಣವೇನು?

Bhadra-Dam-General-Image

SHIVAMOGGA LIVE NEWS | 9 SEPTEMBER 2023 SHIMOGA : ಭದ್ರಾ ಅಚ್ಚುಕಟ್ಟು (Bhadra Dam) ವ್ಯಾಪ್ತಿಯಲ್ಲಿ ಭತ್ತ ಮತ್ತು ಅಧಿಕ ನೀರು ಬೇಡುವ ಯಾವ ಬೆಳೆಯನ್ನೂ ಬೆಳೆಯಬಾರದು ಎಂದು ನೀರಾವರಿ ಇಲಾಖೆ ಆದೇಶಿಸಿದೆ. ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಬೇಸಿಗೆಯಲ್ಲಿ ಕುಡಿಯುವುದಕ್ಕೆ, ತೋಟಗಾರಿಕೆ ಹಾಗೂ ಇತರೆ ಬೆಳೆಗಳಿಗೆ ನೀರು ಸಂಗ್ರಹಿಸಿಡಬೇಕಿದೆ. ಆದ್ದರಿಂದ ಭತ್ತ ಹಾಗೂ ಇತರೆ ಬೆಳೆಗಳನ್ನು ಬೆಳೆಯದಂತೆ ಸೂಚಿಸಲಾಗಿದೆ‌. ಇದನ್ನೂ ಓದಿ – BREAKING NEWS – ಭದ್ರಾ … Read more