ಇನ್ಮುಂದೆ ಫ್ಲಿಪ್ ಕಾರ್ಟ್‌ನಲ್ಲಿ ದೊರೆಯಲಿದೆ ಸಾಲ, ಗ್ರಾಹಕರು, ಮಾರಾಟಗಾರರಿಗೆ ಅನುಕೂಲ, ಹೇಗದು?
ಬೆಂಗಳೂರು: ದೇಶದ ಪ್ರಮುಖ ಇ-ಕಾಮರ್ಸ್ ವೇದಿಕೆಯಾದ ಫ್ಲಿಪ್‌ಕಾರ್ಟ್‌ಗೆ (Flipkart) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ ನೀಡಿದೆ. ಇದರೊಂದಿಗೆ ಫ್ಲಿಪ್‌ಕಾರ್ಟ್ ಈಗ ತನ್ನ ಪ್ಲಾಟ್‌ಫಾರ್ಮ್ ಮೂಲಕ ನೇರವಾಗಿ ಗ್ರಾಹಕರು ಮತ್ತು ಮಾರಾಟಗಾರರಿಗೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಾಗಲಿದೆ. ಈ ಪರವಾನಗಿ ಇ-ಕಾಮರ್ಸ್ ವಲಯದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಸದ್ಯ ಹೆಚ್ಚಿನ ಇ-ಕಾಮರ್ಸ್ ಕಂಪನಿಗಳು ಬ್ಯಾಂಕ್ ಅಥವಾ ಇತರೆ ಎನ್‌ಬಿಎಫ್‌ಸಿಗಳ ಸಹಯೋಗದಲ್ಲಿ ಸಾಲ ನೀಡುತ್ತಿವೆ. ಆದರೆ ಫ್ಲಿಪ್‌ಕಾರ್ಟ್ ಆರ್‌ಬಿಐನಿಂದ ನೇರವಾಗಿ ಈ ಪರವಾನಗಿ … Read more