ಪಲ್ಟಿಯಾದ ಕಾರಿನಲ್ಲಿದ್ದರು ಮೂವರು, ಜೊತೆಗೆರಡು ಹಸುಗಳು, ಶಿವಮೊಗ್ಗದಲ್ಲಿ ಗೋವು ಕಳ್ಳರು ಅರೆಸ್ಟ್

170620 Car Accident Near Lakkinkoppa with Cows in it 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜೂನ್ 2020 ದಿನೇ ದಿನೇ ಹಸುಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಾರುಗಳಲ್ಲಿ ಬಂದು ಹಸುಗಳನ್ನು ಕದ್ದೊಯ್ಯುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದವು. ಶಿವಮೊಗ್ಗ ತಾಲೂಕು ಲಕ್ಕಿನಕೊಪ್ಪ ಸಮೀಪ ಸಂಭವಿಸಿದ ಅಪಘಾತ ಪ್ರಕರಣದಿಂದ ಕಾರಿನಲ್ಲಿ ಹಸುಗಳನ್ನು ಕದ್ದೊಯ್ಯುವ ಪ್ರಕರಣ ಬಯಲಾಗಿದೆ. ಏನಿದು ಘಟನೆ? ಸೋಮವಾರ ಬೆಳಗ್ಗೆ ಲಕ್ಕಿನಕೊಪ್ಪ ಗ್ರಾಮದ ಸಮೀಪ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದರು. ರಕ್ಷಣೆಗೆ ಬಂದಿದ್ದ ಸ್ಥಳೀಯರಿಗೆ ಕಾರಿನಲ್ಲಿ ಎರಡು ಹಸುಗಳಿದ್ದದ್ದು ಕಂಡು ಬಂದಿದೆ. … Read more