ಹೊಸನಗರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಲಾರಿಗಳು ಪೊಲೀಸ್‌ ವಶಕ್ಕೆ, ಕಾರಣವೇನು?

Ripponpete-Board-in-Hosanagara-Taluk.webp

ರಿಪ್ಪನ್‌ಪೇಟೆ: ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ 2 ಲಾರಿಗಳನ್ನು (two trucks) ಪಟ್ಟಣದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಎಸ್‌ಐ ರಾಜುರೆಡ್ಡಿ, ಸಿಬ್ಬಂದಿ ಗಸ್ತಿನಲ್ಲಿದ್ದ ಸಂದರ್ಭ ಹೊಸನಗರದ ಕಡೆಯಿಂದ ಶಿವಮೊಗ್ಗ ಮಾರ್ಗವಾಗಿ ಚಲಿಸುತ್ತಿದ್ದ ಲಾರಿಗಳನ್ನು ಗವಟೂರು ಸಮೀಪ ತಪಾಸಣೆ ಮಾಡಿದಾಗ ಪರವಾನಗಿ ರಹಿತ ಮರಳು ಸಾಗಣೆ ಕಂಡುಬಂದಿದೆ. ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ – ಭದ್ರಾ ಡ್ಯಾಮ್‌: ಜನವರಿ 31ರವರೆಗೆ ನದಿಗೆ ನೀರು, ಕಾರಣವೇನು? ಎಷ್ಟು ಹರಿಸಲಾಗುತ್ತದೆ?