ಖಾಲಿ ಕೊಡ ಹಿಡಿದು ಮಹಿಳೆಯರ ಆಕ್ರೋಶ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದಿಗ್ಬಂಧನದ ಎಚ್ಚರಿಕೆ

protest-for-drinking-water-in-Chandaladimba-near-ripponpete

SHIVAMOGGA LIVE NEWS | 9 APRIL 2023 RIPPONPETE : ಗ್ರಾಮ ಪಂಚಾಯಿತಿಯಿಂದ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ (Protest) ನಡೆಸಿದರು. ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಾಳದಿಂಬ ಗ್ರಾಮದಲ್ಲಿ ಮಹಿಳೆಯರು ಪ್ರತಿಭಟಿಸಿದರು. ಚಂದಾಳದಿಂಬ ಗ್ರಾಮದಲ್ಲಿ 50ಕ್ಕಿಂತಲೂ ಹೆಚ್ಚು ಮನೆಗಳಿವೆ. ಶುದ್ಧ ಕುಡಿಯುವ ನೀರು ಸಿಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ನಲ್ಲಿ ಸಂಪರ್ಕ ನೀಡಿದ್ದರೂ ನೀರು ಪೂರೈಕೆಯಾಗುತ್ತಿಲ್ಲ. ಜನರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಟ್ಯಾಂಕರ್‍ನಲ್ಲಿ ನೀರು ಪೂರೈಕೆ ಮಾಡಲಾಯಿತು. … Read more

ಅಪಘಾತ, ಎರಡು ಭಾಗವಾಯ್ತು ಪಿಕಪ್ ವಾಹನ, ರಸ್ತೆ ಬದಿ ನುಗ್ಗಿತು ಖಾಸಗಿ ಬಸ್

Ripponpete-Bus-Bolero-Accident.

SHIVAMOGGA LIVE NEWS | 23 MARCH 2023 RIPPONPETE : ಖಾಸಗಿ ಬಸ್ ಮತ್ತು ಬೊಲೇರೋ ಗೂಡ್ಸ್ ಗಾಡಿ ಮಧ್ಯೆ ಡಿಕ್ಕಿಯಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಬೊಲೇರೋ (Bolero) ವಾಹನ ಎರಡು ಭಾಗವಾಗಿದೆ. ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಗೊಬ್ಬರಗುಂಡಿ ಬಳಿ ಘಟನೆ ಸಂಭವಿಸಿದೆ. ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಬೊಲೇರೋಗೆ (Bolero) ಡಿಕ್ಕಿಯಾಗಿದೆ. ಅಪಘಾತ ಸಂಭವಿಸಿ ಬಸ್ ರಸ್ತೆ ಪಕ್ಕದ ಜಾಗಕ್ಕೆ ನುಗ್ಗಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದವರಿಗೆ ಯಾವುದೆ ಸಮಸ್ಯೆಯಾಗಿಲ್ಲ. … Read more

ಶಿವಮೊಗ್ಗ ಜಿಲ್ಲೆಯ 3 ಗ್ರಾಮ ಪಂಚಾಯಿತಿಯ 4 ಸ್ಥಾನಕ್ಕೆ ಉಪ ಚುನಾವಣೆ, ದಿನಾಂಕ ನಿಗದಿ

shimoga dc office

SHIVAMOGGA LIVE NEWS | 3 FEBRUARY 2023 SHIMOGA : ವಿವಿಧ ಕಾರಣಕ್ಕೆ ತೆರವಾಗಿರುವ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಉಪ ಚುನಾವಣೆ (By Election) ನಡೆಸಲು ದಿನಾಂಕ ನಿಗದಿಯಾಗಿದೆ. ಫೆ.25ರಂದು ಮತದಾನ ನಡೆಯಲಿದೆ. ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 4 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಯಾವ್ಯಾವ ಗ್ರಾ. ಪಂನಲ್ಲಿ ಚುನಾವಣೆ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿಯ ಒಂದು ಸ್ಥಾನ, ನಾಗೋಡಿ (ನಿಟ್ಟೂರು) ಗ್ರಾಮ ಪಂಚಾಯಿತಿಯ ಎರಡು ಸ್ಥಾನ, ಭದ್ರಾವತಿ … Read more

ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ, ಮೂವರು ತಹಶೀಲ್ದಾರ್ ಗಳು ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

ADC-and-Tahasildhar-Transfer-in-Shimoga-district.

SHIVAMOGGA LIVE NEWS | 1 FEBRUARY 2023 SHIMOGA | ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಅಧಿಕಾರಿಗಳ ವರ್ಗಾವಣೆ (officer transfer) ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮತ್ತು ಮೂರು ತಾಲೂಕುಗಳ ತಹಶೀಲ್ದಾರ್ ಗಳ ವರ್ಗಾವಣೆಯಾಗಿದೆ. ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಅವರನ್ನು ವರ್ಗಾಯಿಸಲಾಗಿದೆ. ನೂತನ ಅಪರ ಜಿಲ್ಲಾಧಿಕಾರಿಯಾಗಿ ಎಸ್.ಎಸ್.ಬಿರಾದರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಮೂವರು ತಹಶೀಲ್ದಾರ್ ವರ್ಗಾವಣೆ ಜಿಲ್ಲೆಯ ಮೂವರು ತಹಶೀಲ್ದಾರ್ ಗಳ ವರ್ಗಾವಣೆ (officer transfer) ಮಾಡಲಾಗಿದೆ. ಶಿವಮೊಗ್ಗ, ಭದ್ರಾವತಿ ಮತ್ತು … Read more

ರಾತ್ರಿ ಜಮೀನಿಗೆ ಹೋದವರು ಬೆಳಗ್ಗೆವರೆಗೆ ಮನೆಗೆ ಬರಲಿಲ್ಲ, ಹುಡುಕಿ ಹೋದವರಿಗೆ ಸಿಕ್ಕಿದ್ದು ರೈತನ ಮೃತದೇಹ

Farmer-Suicide-General-Image

SHIVAMOGGA LIVE NEWS | 20 JANUARY 2023 RIPPONPETE : ಸಾಲ ಬಾಧೆಗೆ ಮನನೊಂದು ರೈತರೊಬ್ಬರು (farmer) ಜಮೀನಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಜಮೀನಿಗೆ ಹೋದವರು ಮನೆಗೆ ಹಿಂತಿರುಗದ ಹಿನ್ನೆಲೆ ಕುಟುಂಬದವರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಕ್ಕಿ ಗ್ರಾಮದ ಬುಲ್ಡೋಜರ್ ಗುಡ್ಡದ ನಿವಾಸಿ ರಾಜಪ್ಪ (63) ಆತ್ಮಹತ್ಯೆ (farmer) ಮಾಡಿಕೊಂಡಿರುವ ರೈತ. 1.35 ಎಕರೆ ಜಮೀನು ಇದ್ದು, ಭತ್ತ ಮತ್ತು ಶುಂಠಿ ಬೆಳೆದಿದ್ದಾರೆ. ವಿವಿಧ … Read more

ಬಟ್ಟೆಮಲ್ಲಪ್ಪ ಬಳಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ಪಿಯುಸಿ ವಿದ್ಯಾರ್ಥಿನಿ

Hosanagara-Police-Station-Board

SHIVAMOGGA LIVE NEWS | 10 JANUARY 2023 ಹೊಸನಗರ : ಚಲಿಸುತ್ತಿದ್ದ ಬಸ್ಸಿನಿಂದ (moving bus) ಕೆಳಗೆ ಬಿದ್ದು ಪಿಯುಸಿ ವಿದ್ಯಾರ್ಥಿಯೊಬ್ಬಳು ಗಾಯಗೊಂಡಿದ್ದಾಳೆ. ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಗಾಣಿಗ ಗ್ರಾಮದಿಂದ ಹೊಸನಗರದಲ್ಲಿರುವ ಕಾಲೇಜಿಗೆ ಖಾಸಗಿ ಬಸ್ಸಿನಲ್ಲಿ (moving bus) ತೆರಳುವಾಗ ಬಟ್ಟೆಮಲ್ಲಪ್ಪ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬಸ್ಸಿನ ಡೋರ್ ಹಾಕದಿರುವುದು ಮತ್ತು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಪಿಯುಸಿ ವಿದ್ಯಾರ್ಥಿನಿ ಕೆಳಗೆ ಬಿದ್ದಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆಕೆಯ … Read more

ಸಿಗಂದೂರಿಗೆ ತೆರಳಬೇಕಿದ್ದ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮಿಗೆ ಲಾಡ್ಜ್ ನಲ್ಲಿ ಹೃದಯಾಘಾತ

Hosanagara-Police-Station-Board

SHIVAMOGGA LIVE NEWS |6 JANUARY 2023 HOSANAGARA : ಕುಟುಂಬ ಸಹಿತ ತೀರ್ಥ ಕ್ಷೇತ್ರಗಳ ಪ್ರವಾಸಕ್ಕೆ ಆಗಮಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಹೃದಯಾಘಾತದಿಂದ ಲಾಡ್ಜ್ ನಲ್ಲಿ (lodge) ಮೃತಪಟ್ಟಿದ್ದಾರೆ. ಬೆಂಗಳೂರು ಆನೆಪಾಳ್ಯ ನಿವಾಸಿ ಮುನಿರಾಜು (40) ಮೃತರು. ಹೊಸನಗರದ ಲಾಡ್ಜ್ ಒಂದರಲ್ಲಿ ಕುಟುಂಬದೊಂದಿಗೆ ಉಳಿದುಕೊಂಡಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿದ್ದು, ಮುನಿರಾಜು ಅವರು ಕೊನೆಯುಸಿರೆಳೆದಿದ್ದಾರೆ. ಸಿಗಂದೂರಿಗೆ ತೆರಳಬೇಕಿತ್ತು ಮುನಿರಾಜು, ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದ ಹೊರಟು ಹೊರನಾಡ, ಶೃಂಗೇರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಸಿಗಂದೂರಿಗೆ … Read more

ಪ್ರಸನ್ನ ಭಟ್ ಅಂತಿಮ ದರ್ಶನಕ್ಕೆ ಶಿವಮೊಗ್ಗ, ಹೊಸನಗರದಲ್ಲಿ ದೊಡ್ಡ ಸಂಖ್ಯೆಯ ಜನ, ಮುಖ್ಯ ರಸ್ತೆಯಲ್ಲಿ ಮೆರವಣಿಗೆ

Prasanna-Bhat-last-rites-procession-in-Hosanagara

SHIVAMOGGA LIVE NEWS | 02 JANUARY 2023 ಶಿವಮೊಗ್ಗ / ಹೊಸನಗರ :  ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೊಗ್ರಾಫರ್ ಪ್ರಸನ್ನ ಭಟ್ ಅವರ ಪಾರ್ಥಿವ ಶರೀರದ ಮೆರವಣಿಗೆ (procession) ಮಾಡಿ, ಬೈಕ್ ರಾಲಿ ನಡೆಸಲಾಯಿತು. ಹೊಸನಗರದ ಪಟ್ಟಣಕ್ಕೆ ಪಾರ್ಥಿವ ಶರೀರ ತಲುಪುತ್ತಿದ್ದಂತೆ ಅವರ ಸ್ನೇಹಿತರು, ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಹೊಸನಗರ ಮುಖ್ಯ ರಸ್ತೆಯಲ್ಲಿ ಮೆರವಣಿಗೆ (procession) ನಡೆಸಲಾಯಿತು. ಬಳಿಕ ನೆಹರು ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಸನ್ನ ಭಟ್ ಅವರ ಸ್ನೇಹಿತರು, ಬಿಜೆಪಿ, … Read more

ನಗದು, ಬೆಳ್ಳಿ ವಿಗ್ರಹದ ಜೊತೆಗೆ ಸಾಕ್ಷಿ ನಾಶಕ್ಕೆ ಸಿಸಿಟಿವಿ ಡಿವಿಆರ್ ಕದ್ದೊಯ್ದ ಕಳ್ಳರು

theft case general image

SHIVAMOGGA LIVE NEWS | 30 DECEMBER 2022 ಹೊಸನಗರ  : ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲಿನ ಬೀಗ (theft at society) ಮುರಿದು ನಗದು, ದೇವರ ಬೆಳ್ಳಿ ವಿಗ್ರಹ, ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಲಾಗಿದೆ. ಹೊಸನಗರ ತಾಲೂಕು ನಗರದ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಸ್ವಚ್ಛತಾ ಕಾರ್ಯ ನಡೆಸಲು ಸಿಬ್ಬಂದಿ ಬಂದಾಗ ಕಳ್ಳತನ ಬೆಳಕಿಗೆ (theft at society) ಬಂದಿದೆ. ಇದನ್ನೂ ಓದಿ … Read more

ಭತ್ತ ಒಕ್ಕಲು ವೇಳೆ ಯಂತ್ರಕ್ಕೆ ಸಿಲುಕಿ ರೈತನ ಬಲಗೈ ಕಟ್

HOSANAGARA-TALUK-NEWS-1.jpg

SHIVAMOGGA LIVE NEWS | 7 DECEMBER 2022 ಹೊಸನಗರ : ಭತ್ತದ ಒಕ್ಕಲು ಮಾಡುವಾಗ ಮಿಷನ್ ಗೆ ಸಿಲುಕಿ ರೈತನ ಕೈ ತುಂಡಾಗಿದೆ. ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. (farmer hand cut) ಹೊಸನಗರ ತಾಲೂಕು ದೇವಗಂಗೆ ಗ್ರಾಮದ ರೈತ ವಿಶ್ವಾನಾಥ್ ಅವರ ಬಲಗೈ ತುಂಡಾಗಿದೆ. ಗ್ರಾಮದ ಮಹೇಶ ಗೌಡ ಎಂಬುವವರ ಜಮೀನಿನಲ್ಲಿ ಭತ್ತದ ಒಕ್ಕಲು ಮಾಡಲಾಗುತ್ತಿತ್ತು. ಈ ವೇಳೆ ವಿಶ್ವನಾಥ್ ಅವರ … Read more