ಮಡಬೂರು ರಾಜೇಂದ್ರ ಶಿವಮೊಗ್ಗದಲ್ಲಿ ನಿಧನ, ಮಾಜಿ ಪ್ರಧಾನಿ, ಕೇಂದ್ರ ಸಚಿವರಿಂದ ಸಂತಾಪ

HT-Rajendra-Madaburu

ಶಿವಮೊಗ್ಗ: ಚಿಕ್ಕಮಗಳೂರು JDS ಮುಖಂಡ ಹೆಚ್‌.ಟಿ.ರಾಜೇಂದ್ರ (72) ಹೃದಯಾಘಾತದಿಂದ ಶಿವಮೊಗ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೇಂದ್ರ ಅವರು ಎನ್‌.ಆರ್‌.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಬೂರು ಗ್ರಾಮದವರು. ಭಾನುವಾರ ಸಂಜೆ ಅಸ್ವಸ್ಥರಾಗಿದ್ದ ಅವರನ್ನು ಎನ್.‌ಆರ್‌.ಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೃದಯಾಘಾತದಿಂದ ಕಳೆದ ರಾತ್ರಿ ಕೊನೆಯುಸಿರೆಳೆದಿದ್ದಾರೆ. ರಾಜೇಂದ್ರ ಅವರಿಗೆ ಪತ್ನಿ ಪಲ್ಲವಿ, ಪುತ್ರ ಅನಿರುದ್ಧ ಇದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜೈಲಿನ ಖೈದಿಯ … Read more