ಸಾವಿರ ಸಾವಿರ ಭಕ್ತರ ಸಮ್ಮುಖದಲ್ಲಿ ಹುಚ್ಚರಾಯಸ್ವಾಮಿಯ ವಿಜೃಂಭಣೆಯ ರಥೋತ್ಸವ
ಶಿಕಾರಿಪುರ : ಕ್ಷೇತ್ರ ದೇವತೆ ಹುಚ್ಚುರಾಯಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ದವನದ ಹುಣ್ಣಿಮೆಯಂದು ಸಾವಿರಾರು ಭಕ್ತರ ಜಯಘೋಷದೊಂದಿಗೆ ರಥೋತ್ಸವ (Ratotsava) ನೆರವೇರಿತು. ಶನಿವಾರ ಬೆಳಗ್ಗೆ 8.30ರ ವೃಷಭ ಲಗ್ನದಲ್ಲಿ ಶ್ರೀ ಹುಚ್ಚರಾಯಸ್ವಾಮಿಯ ರಥಾರೋಹಣ, ಫಲ ಸಮರ್ಪಣೆ, ಮಹಾಮಂಗಳಾರತಿ ನಂತರ ವಾದ್ಯಗೋಷ್ಠಿಗಳ ನಡುವೆ ರಥಬೀದಿಯಲ್ಲಿ ತೇರು (Ratotsava) ಸಂಚರಿಸಿತು. ಭಕ್ತರು ಬಾಳೆಹಣ್ಣು, ದವನದ ಸೊಪ್ಪನ್ನು ತೇರಿಗೆ ಎಸೆದರು. ಮಾರಿಕಾಂಬ ಗದ್ದುಗೆವರೆಗೆ ರಥವನ್ನು ಎಳೆಯಲಾಯಿತು. ನಂತರ ಭಕ್ತರಿಗೆ ಹಣ್ಣು ಕಾಯಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಯಿತು. ಗರುಡ ದರ್ಶನದಿಂದ ಹರ್ಷೋದ್ಗೋರ … Read more