ಮಾಚೇನಹಳ್ಳಿಯಲ್ಲಿ ಕೆಲಸ ಮುಗಿಸಿ ಹೊರ ಬಂದ ಉದ್ಯೋಗಿಗೆ ಕಾದಿತ್ತು ಶಾಕ್

bike theft reference image

BHADRAVATHI NEWS, 18 NOVEMBER 2024 : ಮಾಚೇನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ಉದ್ಯೋಗಿಯೊಬ್ಬರ ಬೈಕ್‌ (Bike) ಕಳ್ಳತನವಾಗಿದೆ. ಕಾರ್ಖನೆಯೊಂದರ ಮುಂದೆ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ನಾಪತ್ತೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಭದ್ರಾವತಿಯ ಮಂಜು ನಾಯ್ಕ್‌ ಮಾಚೇನಹಳ್ಳಿಯ ಕೈಗಾರಿಕೆ ಪ್ರದೇಶದ ಕೈಗಾರಿಕೆಯೊಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಕಾರ್ಖಾನೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಕ ಮಂಜು ನಾಯ್ಕ್‌ ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ … Read more

BREAKING NEWS | ಅಭಿನಯ ಶಾರದೆ ನಟಿ ಜಯಂತಿ ಇನ್ನಿಲ್ಲ

260721 Actress Jayanthi No More 1

ಶಿವಮೊಗ್ಗ ಲೈವ್.ಕಾಂ | STATE NEWS | 26 ಜುಲೈ 2021 ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ (76) ವಿಧಿವಶರಾಗಿದ್ದಾರೆ. ಬೆಂಗಳೂರಿನ ತಮ್ಮ ಮನೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅಸ್ತಮ ಮತ್ತು ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಅನಾರೋಗ್ಯದ ಕಾರಣ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. 500ಕ್ಕೂ ಹೆಚ್ಚು ಸಿನಿಮಾಗಳು ಜಯಂತಿ ಅವರು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. 1963ರಲ್ಲಿ ವೈ.ಆರ್.ಸ್ವಾಮಿ ನಿರ್ದೇಶನದ ಜೇನುಗೂಡು ಚಿತ್ರದ … Read more

ವಿಮಾನ ನಿಲ್ದಾಣ, ಚತುಷ್ಪಥ ರಸ್ತೆ, ಶಿವಮೊಗ್ಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಸೂಕ್ತ, ತೀರ್ಥಹಳ್ಳಿಯಲ್ಲಿ ವಸಾಹತುಗೆ ಕಾಸಿಯಾ ಮನವಿ

190920 Industrial Meeting at Machenahalli 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಸೆಪ್ಟಂಬರ್ 2020 ಕೋವಿಡ್ ಸಂದರ್ಭ ಬೇರೆ ನಗರ, ಜಿಲ್ಲೆಯಿಂದ ಶಿವಮೊಗ್ಗಕ್ಕೆ ಹಿಂತಿರುಗಿರುವ ಪ್ರತಿಭಾವಂತರು ಕೈಗಾರಿಕೆಗಳನ್ನು ಆರಂಭಿಸುವ ಹೊಸ ಸಾದ್ಯತೆಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಸರ್ಕಾರದ ವತಿಯಿಂದ ಅಂತಹವರಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು. ಮಾಚೇನಹಳ್ಳಿಯಲ್ಲಿ ನೂತನ ಕೈಗಾರಿಕಾ ನೀತಿ ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಕಾರ್ಯಕ್ರಮ, ಕಾರ್ಮಿಕ ಕಾನೂನು ತಿದ್ದುಪಡಿಗಳ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಕುಮಾರ್, ಶಿವಮೊಗ್ಗ … Read more