ಇಂಟರ್’ಸಿಟಿ ರೈಲಿಗೆ ಸಿಲುಕಿ ಸಾಗರದ ಮೀನು ವ್ಯಾಪಾರಿ ಸಾವು
ಶಿವಮೊಗ್ಗ ಲೈವ್.ಕಾಂ | SAGARA | 7 ನವೆಂಬರ್ 2019 ಇಂಟರ್’ಸಿಟಿ ರೈಲಿಗೆ ಸಿಲುಕಿ ಮೀನು ವ್ಯಾಪಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಸಾಗರದ ಚಂದ್ರಮಾವಿನಕೊಪ್ಪಲು ರೈಲು ಹಳಿ ಬಳಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಗುಲಾಮುಹಿದ್ದಿನ್ ರಸ್ತೆಯ ಮೀನು ವ್ಯಾಪಾರಿ ಮುಕ್ತಿಯಾರ್ (38) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬೆಳಗ್ಗೆ ಇಂಟರ್’ಸಿಟಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ ತಿಂಗಳು ಮುಕ್ತಿಯಾರ್ ಅವರ ಪತ್ನಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. … Read more