ಶಿವಮೊಗ್ಗದ ನೂತನ ರಕ್ಷಣಾಧಿಕಾರಿ ಅಧಿಕಾರ ಸ್ವೀಕಾರ, ಮಹತ್ವದ ಮೀಟಿಂಗ್
ಶಿವಮೊಗ್ಗ: ಜಿಲ್ಲೆಯ ನೂತನ ರಕ್ಷಣಾಧಿಕಾರಿಯಾಗಿ ಬಿ.ನಿಖಿಲ್ (Nikhil IPS) ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಅವರು ಬಿ.ನಿಖಿಲ್ ಅವರಿಗೆ ಅಧಿಕಾರ ವಹಿಸಿಕೊಟ್ಟರು. ಸಂಜೆ ಶಿವಮೊಗ್ಗಕ್ಕೆ ಆಗಮನ ಐಪಿಎಸ್ ಅಧಿಕಾರಿ ಬಿ.ನಿಖಿಲ್ ಅವರು ಇಂದು ಸಂಜೆ ಶಿವಮೊಗ್ಗಕ್ಕೆ ಆಗಮಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನೂತನ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಇದೇ ವೇಳೆ ಹೆಚ್ಚುವರಿ ರಕ್ಷಣಾಧಿಕಾರಿಗಳು, ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳ ಪರಿಚಯ ಮಾಡಿಕೊಂಡರು. ಮೊದಲ ಮಹತ್ವದ ಮೀಟಿಂಗ್ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರು ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳ … Read more