ಭದ್ರಾವತಿಯಲ್ಲಿ ಚಿನ್ನಾಭರಣ ಕಳ್ಳತನ, ಬೆಂಗಳೂರು ಕೆಂಗೇರಿಯ ಮಹಿಳೆ ಸೇರಿ ಇಬ್ಬರ ಬಂಧನ
ಭದ್ರಾವತಿ: ಮನೆಯ ಬೀರುವಿನಲ್ಲಿದ್ದ 95 ಗ್ರಾಂ ಬಂಗಾರದ ಆಭರಣ ಕಳವು ಮಾಡಿದ್ದ ಇಬ್ಬರನ್ನು ಪೇಪರ್ ಟೌನ್ ಪೊಲೀಸರು ಬಂಧಿಸಿದ್ದಾರೆ (Arrest). ಇವರಿಂದ ₹7.82 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ನಿವಾಸಿ ಆರ್.ಮಂಜುಳಾ(21) ಮತ್ತು ಸುಜೈನ್ ಖಾನ್ (24 ) ಬಂಧಿತರು. ಕಳೆದ ಆ.18ರಂದು ಭದ್ರಾವತಿಯ ಐದನೇ ವಾರ್ಡ್‌ನ ಚಂದ್ರಮ್ಮ ಎಂಬುವರ ಮನೆಗೆ ಬಂದಿದ್ದ ಇವರು ಬೀರುವಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದರು. ಈ ಬಗ್ಗೆ ಚಂದ್ರಮ್ಮ ಅವರು ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. … Read more