ಶಿವಮೊಗ್ಗದಲ್ಲಿ ಧಗಧಗ ಹೊತ್ತಿ ಉರಿದ ಬಟ್ಟೆ ಅಂಗಡಿ, ಜ್ಯೂಸ್‌ ಸೆಂಟರ್‌

Incident-at-Shimoga-BH-Road-Juice-Center.

ಶಿವಮೊಗ್ಗ: ನಗರದಲ್ಲಿ ಬಟ್ಟೆ ಅಂಗಡಿ (shop) ಮತ್ತು ಜ್ಯೂಸ್‌ ಸೆಂಟರ್‌ನಲ್ಲಿ ಬೆಂಕಿ ಹೊತ್ತುಕೊಂಡಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ. ಶಿವಮೊಗ್ಗದ ಕರ್ನಾಟಕ ಸಂಘ ಸಮೀಪ ತಗಡು ಶೀಟ್‌ಗಳನ್ನು ಬಳಸಿ ನಿರ್ಮಿಸಿದ್ದ ಮಳಿಗೆಯಲ್ಲಿ ಇಂದು ಸಂಜೆ ಬೆಂಕಿ ಹೊತ್ತುಕೊಂಡಿದೆ. ಅಂಗಡಿಯಲ್ಲಿದ್ದ ಬಟ್ಟೆ ಸಂಪೂರ್ಣ ಸುಟ್ಟು ಹೋಗಿದೆ. ಜ್ಯೂಸ್‌ ಸೆಂಟರ್‌ನಲ್ಲಿದ್ದ ರೆಫ್ರಿಜರೇಟರ್‌, ಮಿಕ್ಸಿ ಸೇರಿದಂತೆ ಹಲುವು ವಸ್ತುಗಳು ಆಹುತಿಯಾಗಿವೆ. ಇನ್ನು, ಅಂಗಡಿಯಲ್ಲಿ ಸಣ್ಣ ಅಡುಗೆ ಸಿಲಿಂಡರ್‌ ಇತ್ತು. ಅದರಲ್ಲಿ ಗ್ಯಾಸ್‌ ಖಾಲಿಯಾಗಿತ್ತು ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಅದೃಷ್ಟವಶಾತ್‌ … Read more

ಗಾಂಧಿ ಬಜಾರ್‌ನ ಅಂಗಡಿ ಮೇಲೆ ಅಧಿಕಾರಿಗಳು ದಾಳಿ, ಮಾಲೀಕನ ವಿರುದ್ಧ ಕೇಸ್‌, ಯಾಕೆ?

041023 Gandhi Bazaar In Shimoga.webp

ಶಿವಮೊಗ್ಗ: ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿರುವ ಮಾಹಿತಿ ಹಿನ್ನೆಲೆ ಗಾಂಧಿ ಬಜಾರ್‌ನಲ್ಲಿರುವ ಆಹಾರ ಸಂಸ್ಕರಣಾ ಮಳಿಗೆ (shop) ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭ ಮಳಿಗೆಯಲ್ಲಿ ಗೃಹಬಳಕೆಯ ಎರಡು ಖಾಲಿ ಸಿಲಿಂಡರ್‌ಗಳು ಪತ್ತೆಯಾಗಿವೆ. ಸಿಲಿಂಡರ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಗೃಹಬಳಕೆಯ ಸಿಲಿಂಡರ್ ಬಳಸುತ್ತಿರುವ ಹಿನ್ನೆಲೆ ಅಂಗಡಿ ಮಾಲೀಕನ ವಿರುದ್ಧ ದೂರು ನೀಡಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಶಿವಮೊಗ್ಗದ ರೈಸ್‌ ಮಿಲ್‌ ಮಾಲೀಕನಿಗೆ ಹಾಸನದ ವ್ಯಕ್ತಿಯಿಂದ ಲಕ್ಷ ಲಕ್ಷ ವಂಚನೆ, ಆಗಿದ್ದೇನು?

Kote Police station building

ಶಿವಮೊಗ್ಗ: ನಗರದ ರೈಸ್ ಮಿಲ್ (rice mill) ಮಾಲೀಕ ಶಿವಕುಮಾರ್ ಅವರಿಗೆ ಅಕ್ಕಿ ವ್ಯಾಪಾರದಲ್ಲಿ ಸುಮಾರು ₹30 ಲಕ್ಷಕ್ಕು ಅಧಿಕ ಹಣ ವಂಚಿಸಿರುವ ಘಟನೆ ನಡೆದಿದೆ. ಇದನ್ನೂ ಓದಿ » ‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು? ಹಾಸನದ ವಾಸೀಂ ಎಂಬಾತ ಕಳೆದ ಒಂದು ವರ್ಷದಿಂದ ಶಿವಕುಮಾರ್ ಅವರ ಮಿಲ್‌ನಿಂದ ಅಕ್ಕಿ ಮೂಟೆಗಳನ್ನು ಪಡೆದುಕೊಂಡಿದ್ದರು. ಆರಂಭದಲ್ಲಿ ಸಕಾಲಕ್ಕೆ ಹಣ ಪಾವತಿಸಿ ನಂಬಿಕೆ ಗಳಿಸಿದ್ದರು. ನಂತರ ಅಕ್ಕಿ ಪಡೆದು ಹಣ ನೀಡದೆ ಸತಾಯಿಸಿದ್ದಾರೆ … Read more

‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?

bh-road-in-Shimoga-shivappanayaka-statue

ಶಿವಮೊಗ್ಗ: ಕರ್ನಾಟಕ ಸಂಘದ ಎದುರಿಗೆ ಇರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ (Bank ATM) ಮಹಿಳೆಯೊಬ್ಬರಿಗೆ ನಂಬಿಸಿ ಹಣ ದೋಚಿರುವ ಘಟನೆ ನಡೆದಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ ಹೊಳೆಹೊನ್ನೂರಿನ ಶಿವಮ್ಮ ಎಂಬುವವರು ಹಣ ಬಿಡಿಸಲು ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ಹಣ ಬಿಡಿಸಿಕೊಡುವುದಾಗಿ ನಂಬಿಸಿದ್ದಾನೆ. ಆತನ ಮಾತು ನಂಬಿ ಮಹಿಳೆಯು ತನ್ನ ಎಟಿಎಂ ಕಾರ್ಡ್ ಹಾಗೂ ಪಿನ್ ನೀಡಿದ್ದಾರೆ. ವ್ಯಕ್ತಿಯು ಹಣ ಬರುತ್ತಿಲ್ಲ … Read more