ಲಾಕ್‌ಡೌನ್ ಇದ್ದರೂ ಜೆಲ್ಲಿ ಕ್ರಷರ್ ಲಾರಿಗಳ ಸಂಚಾರ, ಹೊಸನಗರದಲ್ಲಿ ಗ್ರಾಮಸ್ಥರಿಂದ ಲಾರಿ ತಡೆದು ಆಕ್ರೋಶ
ಶಿವಮೊಗ್ಗ ಲೈವ್.ಕಾಂ | HOSANAGARA | 13 ಏಪ್ರಿಲ್ 2020 ಕರೋನ ಲಾಕ್‌ಡೌನ್ ಅವಧಿಯಲ್ಲೂ ಕ್ರಷರ್‌ಗಳಿಂದ ಲಾರಿಗಳು ಸಂಚರಿಸುತ್ತಿವೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಇವತ್ತು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸನಗರ ತಾಲೂಕು ಕುಂಬತ್ತಿ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರತಿದಿನ ಸುಮಾರು ೧೫ ಲಾರಿಗಳು ಜೆಲ್ಲಿ ಕ್ರಷರ್‌ಗಳಿಂದ ಕುಂಬತ್ತಿ ಗ್ರಾಮದಲ್ಲಿ ಸಂಚರಿಸುತ್ತಿವೆ. ಇದರಿಂದ ಧೂಳು ಹೆಚ್ಚಾಗಿದೆ. ಅಲ್ಲದೆ ಹೊರಗಿನಿಂದ ಲಾರಿಗಳು ಬರುವುದರಿಂದ ಜನರಲ್ಲಿ ಸೋಂಕು ತಗಲುವ ಆತಂಕ ಮೂಡಿದೆ. ಇಲ್ಲಿ ಸುತ್ತಾ ಗ್ರಾಮದಲ್ಲಿ ಇರುವ ಜೆಲ್ಲಿ ಕ್ರಷರ್‌ಗಳಿಂದ … Read more