ಕೊಟ್ಟಿಗೆಗೆ ಬೆಂಕಿ, ಎರಡು ಹಸುಗಳು ಸಜೀವ ದಹನ

Incident-at-barn-in-kyatinakoppa-in-Shimoga-taluk

ಶಿವಮೊಗ್ಗ: ಕೊಟ್ಟಿಗೆಗೆ ಬೆಂಕಿ ಹೊತ್ತುಕೊಂಡು ಎರಡು ಗೋವುಗಳು (cows) ಸಜೀವ ದಹನವಾಗಿವೆ. ಶಿವಮೊಗ್ಗ ತಾಲೂಕು ಸೂಗೂರು ಬಳಿಯ ಕ್ಯಾತಿಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಸಂತೋಷ್‌ ಎಂಬುವವರ ಮನೆ ಹಿಂಭಾಗದ ಕೊಟ್ಟಿಗೆಗೆ ಬೆಂಕಿ ಹೊತ್ತಿದ್ದು, ಎರಡು ಹಸುಗಳು ಸಜೀವ ದಹನವಾಗಿವೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ » ಅಮಿತ್‌ ಷಾಗೆ ಶಿವಮೊಗ್ಗದಿಂದ ಬಳೆ ಪೋಸ್ಟ್‌ ಮಾಡಿದ ಮಹಿಳೆಯರು, ಆಕ್ರೋಶ ವ್ಯಕ್ತಪಡಿಸಿದ ಯುವಕರು