‘ಎಚ್ಚರ.. ಎಚ್ಚರ.. ಈ ರಸ್ತೆ ಲಿಮ್ಕಾ ದಾಖಲೆಗೆ ಸೇರಲಿದೆ’, ಜನರಿಂದ ಬ್ಯಾನರ್, ಎಲ್ಲಿದೆ ಈ ರೋಡ್?
SHIVAMOGGA LIVE NEWS, 3 FEBRUARY 2025 ರಿಪ್ಪನ್‌ಪೇಟೆ : ‘ನಮ್ಮೂರಿಗೆ ನಡೆದುಕೊಂಡೇ ಬನ್ನಿ. ಇಲ್ಲವಾದಲ್ಲಿ ಆಸ್ಪತ್ರೆ ಸೇರುತ್ತೀರʼ ಊರಿನ ಮುಂಭಾಗ ಗ್ರಾಮಸ್ಥರು ಹೀಗೊಂದು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ. ಅಲ್ಲದೆ ‘ಈ ರಸ್ತೆ ಲಿಮ್ಕಾ ದಾಖಲೆ ಪುಸ್ತಕ (limca record) ಸೇರಲಿದೆ’ ಎಂದು ರಸ್ತೆಯ ದುಸ್ಥಿತಿಯನ್ನು ವ್ಯಂಗ್ಯ ಮಾಡಿದ್ದಾರೆ. ಕಳೆದ ಹತ್ತು ವರ್ಷದಿಂದ ಗ್ರಾಮ ಪಂಚಾಯಿತಿ ಮಟ್ಟದಿಂದ ಶಾಸಕರವರೆಗೆ ಹಲವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಊರಿಗೆ ಸರಿಯಾದ ರಸ್ತೆ ನಿರ್ಮಿಸಿಲ್ಲ. ಇದರಿಂದ ಊರಿಗೆ ಯಾವ ವಾಹನಗಳು … Read more