ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ
ಶಿವಮೊಗ್ಗ: ಚಂದ್ರ ಗ್ರಹಣ (lunar eclipse) ಮುಗಿಯುತ್ತಿದ್ದಂತೆ ಶಿವಮೊಗ್ಗ ನಗರದ ವಿವಿಧ ದೇವಸ್ಥಾನಗಳಿಗೆ ದೊಡ್ಡ ಸಂಖ್ಯೆಯ ಭಕ್ತರು ಹರಿದು ಬರುತ್ತಿದ್ದಾರೆ. ಮತ್ತೊಂದೆಡೆ ನಗರದ ವಿವಿಧೆಡೆ ಅಂಗಡಿಗಳು ಬಂದ್ ಆಗಿವೆ. ಜನ ಸಂಚಾರವು ತುಸು ಕಡಿಮೆಯಾಗಿದೆ. ಚಂದ್ರ ಗ್ರಹಣ ದೇವಸ್ಥಾನಗಳು ಬಂದ್ ಚಂದ್ರ ಗ್ರಹಣ ಹಿನ್ನೆಲೆ ಶಿವಮೊಗ್ಗ ನಗರದ ದೇವಸ್ಥಾನಗಳು ಬಂದ್ ಆಗಿದ್ದವು. ಸಂಜೆ ಗ್ರಹಣ ಮುಗಿಯುವವರೆಗೆ ದೇವಸ್ಥಾನಗಳು ಖಾಲಿಯಾಗಿದ್ದವು. ಗ್ರಹಣದ ಬಳಿಕ ದೇವಸ್ಥಾನಗಳಲ್ಲಿ ಶುಚಿ ಕಾರ್ಯ ನಡೆಸಲಾಯಿತು, ದೇವರ ಮೂರ್ತಿಗಳನ್ನು ಶುದ್ಧಗೊಳಿಸಿ ಪೂಜೆ ನಡೆಸಲಾಯಿತು. ಇದನ್ನೂ ಓದಿ … Read more