ಮೇಗರವಳ್ಳಿಯಲ್ಲಿ ಮಂಗಳೂರು ಎಕ್ಸ್‌ಪ್ರೆಸ್‌ ಬಸ್ಸು, ಗೂಡ್ಸ್‌ ವಾಹನ ಮುಖಾಮುಖಿ ಡಿಕ್ಕಿ

Mangalore-Bus-and-goods-vehicle-mishap-at-megaravalli

ತೀರ್ಥಹಳ್ಳಿ: ಗೂಡ್ಸ್‌ ವಾಹನ ಮತ್ತು ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿಯಾಗಿದೆ. ಗೂಡ್ಸ್‌ ವಾಹನದ ಚಾಲಕ ಗಾಯಗೊಂಡಿದ್ದಾನೆ. (Mishap) ಇದನ್ನೂ ಓದಿ » ಶಿವಮೊಗ್ಗದಲ್ಲಿ ‘ಭುಗಿಲುʼ ಬಿಡುಗಡೆ, ಬಿ.ಎಲ್.ಸಂತೋಷ್‌ ಭಾಗಿ, ಏನೆಲ್ಲ ಮಾತನಾಡಿದರು? ಇಲ್ಲಿದೆ ಪ್ರಮುಖಾಂಶ ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಸಮೀಪ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಖಾಸಗಿ ಬಸ್ಸು ತೀರ್ಥಹಳ್ಳಿಯಿಂದ ಮಂಗಳೂರಿಗೆ ತೆರಳುತಿತ್ತು. ಘಟನೆಯಲ್ಲಿ ಬಸ್ಸು ಮತ್ತು ಗೂಡ್ಸ್‌ ವಾಹನದ ಮುಂಭಾಗ ಜಖಂಗೊಂಡಿವೆ. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.