ಮದುವೆ ಮೆನೆಯಲ್ಲಿ ಊಟ ಮಾಡಿ ಅಸ್ವಸ್ಥರಾಗಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಾವು

holehonnur name graphics

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 22 ನವೆಂಬರ್ 2021 ಮದುವೆ ಮನೆಯಲ್ಲಿ ಊಟ ಮಾಡಿ ಅಸ್ವಸ್ಥರಾಗಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರು ಕೊನೆ ಉಸಿರೆಳೆದಿದ್ದಾರೆ. ಈ ಬೆಳವಣಿಗೆ ಜನರಲ್ಲಿ ಭೀತಿ ಉಂಟು ಮಾಡಿದೆ. ದಿನೇಶ್ ಸಿಂಗ್ (42) ಮೃತ ದುರ್ದೈವಿ. ಭದ್ರಾವತಿ ತಾಲೂಕು ಬಾಬಳ್ಳಿಯ ದಿನೇಶ್ ಸಿಂಗ್ ಅರಕೆರೆಯಲ್ಲಿ ವಾಸಿಸುತ್ತಿದ್ದರು. ದಾಸರಕಲ್ಲಹಳ್ಳಿ ಮತ್ತು ಗುಡ್ಡದ ಕೊಮ್ಮರನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು.   ಹೇಗಾಯ್ತು ಘಟನೆ? ಹೊಳೆಹೊನ್ನೂರು ಸಮೀಪ ನಾಗತಿಬೆಳಗಲು ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಕಾರ್ಯಯಕ್ರಮದಲ್ಲಿ … Read more

ಮದುವೆ ಮನೆಯಲ್ಲಿ ಊಟ ಮಾಡಿದ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥ, ಹೊಳೆಹೊನ್ನೂರು, ಭದ್ರಾವತಿ, ಶಿವಮೊಗ್ಗ ಆಸ್ಪತ್ರೆಗೆ ದಾಖಲು

181121 Holehonnur Marriage funtion food poison

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 18 ನವೆಂಬರ್ 2021

ಮದುವೆ ಸಮಾರಂಭದಲ್ಲಿ ಊಟ ಮಾಡಿದ ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವ ಮತ್ತೊಂದು ಪ್ರಕರಣ ವರದಿಯಾಗಿದೆ. ಸುಮಾರು ನೂರು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

AVvXsEg7D64eppM2Y2YXBDC80Q2TdBmP2uvjR kzBF IPI

ಶಿವಮೊಗ್ಗ ತಾಲೂಕು ನಾಗತಿಬೆಳಗಲು ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆದಿತ್ತು. ಕಾರ್ಯಕ್ರಮದಲ್ಲಿ ಊಟ ಮಾಡಿದ್ದ ಹಲವರಲ್ಲಿ ವಾಂತಿ, ಬೇಧಿ, ಜ್ವರ, ಹೊಟ್ಟೆನೋವು ಕಾಣಿಸಿಕೊಂಡಿದೆ.

ಹೊಳೆಹೊನ್ನೂರು, ಭದ್ರಾವತಿ, ಶಿವಮೊಗ್ಗ

ಬುಧವಾರ ಮಧ್ಯಾಹ್ನ ಊಟ ಸೇವಿಸಿದ್ದ ಹಲವರು ರಾತ್ರಿ ವೇಳೆಗೆ ಅಸ್ವಸ್ಥರಾಗಿದ್ದಾರೆ. ಕೂಡಲೆ ಹಲವರು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೂ ಕೆಲವರು ಭದ್ರಾವತಿ ಸಾರ್ವಜನಿಕ ಆಸ್ಪತ್ರೆ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರು ಖಾಸಗಿ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Read more