ಕಾರಿನ ಮೇಲೆ ಜಿಗಿದ ಕಾಡುಕೋಣ

061025-Bison-jumps-on-a-car-in-Thirthahalli.webp

ತೀರ್ಥಹಳ್ಳಿ: ಕಾಡು ಕೋಣವೊಂದು (Bison) ದಿಢೀರ್‌ ರಸ್ತೆಗೆ ಬಂದು ಕಾರಿನ ಮೇಲೆ ಜಿಗಿದಿದೆ. ಕಾರಿನ ಮುಂಭಾಗ ಜಖಂ ಆಗಿದ್ದು ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪಾರಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ನಾಲೂರು ಸಮೀಪ ಘಟನೆ ಸಂಭವಿಸಿದೆ. ಕಾರಿನ ಗಾಜು ಒಡೆದಿದ್ದು, ಬಾನೆಟ್‌ ಸೇರಿದಂತೆ ಕಾರಿನ ಮುಂಭಾಗ ಜಖಂ ಆಗಿದೆ. ಕಾರು ಹಾನಿಗೀಡಾಗಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಹಲವು ಸಬ್‌ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ಟ್ರಾನ್ಸ್‌ಫರ್‌ ಆಗಿದ್ದಾರೆ? Bison

BREAKING NEWS |ಗ್ರಾಮ ಪಂಚಾಯಿತಿ ಸದಸ್ಯರಿಂದ ಪರಿಷತ್ ಮತದಾನ ಬಹಿಷ್ಕಾರದ ನಿರ್ಧಾರ, ಕಾರಣವೇನು?

291121 Naluru Village Election bahishkar vidhana parishad

ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 29 ನವೆಂಬರ್ 2021 ಒಂದೂವರೆ ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಅನುದಾನವಿಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೆ ಕೆಲಸಗಳನ್ನು ಮಾಡಲಾಗುತ್ತಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ. ತೀರ್ಥಹಳ್ಳಿ ತಾಲೂಕು ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿಯ ಏಳು ಸದಸ್ಯರು ಈ ಭಾರಿ ವಿಧಾನ ಪರಿಷತ್ ಚುನಾವಣೆಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ. … Read more