ಶಿವಮೊಗ್ಗದಲ್ಲಿ ಪದಬಂಧ ಸ್ಪರ್ಧೆ, ಎಲ್ಲಿ ನಡೆಯುತ್ತೆ? ಯಾರೆಲ್ಲ ಭಾಗವಹಿಸಬಹುದು?

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 FEBRUARY 2021 ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಫೆ.21ರಂದು ಕಮಲಾ ನೆಹರು ಕಾಲೇಜಿನಲ್ಲಿ ಸಾರ್ವಜನಿಕರಿಗೆ ಪದಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಬಳಗದ ಕಾರ್ಯದರ್ಶಿ  ಆರ್.ಅಚ್ಯುತರಾವ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ದಿನ ಬೆಳಗ್ಗೆ 11ರಿಂದ 12ರವರೆಗೆ ಈ ಸ್ಪರ್ಧೆ ನಡೆಯಲಿದೆ. 10 ಗಂಟೆಯಿಂದ ಸ್ಪರ್ಧಾ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದಾಗಿದೆ. ಪ್ರವೇಶ ಶುಲ್ಕ ಒಬ್ಬರಿಗೆ 20 ರೂ. ನಿಗದಿ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ 8 ಪದಬಂಧಗಳನ್ನು ಬಿಡಿಸಬೇಕಾಗುತ್ತದೆ. … Read more