ಶಿವಮೊಗ್ಗದಲ್ಲಿ ಲಾರಿ ಡಿಕ್ಕಿಯಾಗಿ ಪೊಲೀಸ್ ಚೌಕಿ ನಜ್ಜುಗುಜ್ಜು
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಳೆದ ರಾತ್ರಿ ಅಮೀರ್ ಅಹಮದ್ ಸರ್ಕಲ್‌ನಲ್ಲಿದ್ದ ಪೊಲೀಸ್ ಚೌಕಿಗೆ (Police Chowky) ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗು ಸಮಸ್ಯೆಯಾಗಿಲ್ಲ. ಸರ್ಕಲ್‌ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸ್ಥಾಪಿಸಲಾಗಿದ್ದ ಪೊಲೀಸ್ ಚೌಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸ್ ಚೌಕಿ ಹಾನಿಗೀಡಾಗಿದೆ. ಈ ಸಂದರ್ಭ ಚೌಕಿಯ ಒಳಗೆ ಪೊಲೀಸರು ಇರಲಿಲ್ಲ. ಹಾಗಾಗಿ ಅನಾಹುತ ತಪ್ಪಿದೆ. ನಾಲ್ಕು ದಿನದ ಹಿಂದೆ ಇದೇ ಸರ್ಕಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿತ್ತು. ಇದನ್ನೂ ಓದಿ … Read more