ಕಂಬದ ಮೇಲೆ ಹತ್ತಿ ರಿಪೇರಿ ಮಾಡುತ್ತಿದ್ದ ಪವರ್ ಮ್ಯಾನ್ಗೆ ಕರೆಂಟ್ ಶಾಕ್, ಗಂಭೀರ ಗಾಯ

091020 current shock for power man in shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಅಕ್ಟೋಬರ್ 2020 ಮೆಗ್ಗಾನ್ ಆಸ್ಪತ್ರೆಯ ವಿದ್ಯುತ್ ಪೂರೈಕೆ ಲೈನ್‍ನಲ್ಲಿ ಉಂಟಾದ ಸಮಸ್ಯೆ ರಿಪೇರಿಗೆ ತೆರಳಿದ್ದ ಪವರ್‍ ಮ್ಯಾನ್‍ಗೆ ವಿದ್ಯುತ್ ಶಾಕ್ ಹೊಡೆದಿದೆ. ಕಂಬದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಕೆಪಿಟಿಸಿಎಲ್ ನೌಕರ ಉಮಾಶಂಕರ್ ಅವರಿಗೆ ಕರೆಂಟ್ ಶಾಕ್ ಹೊಡೆದಿದೆ. ಮೆಗ್ಗಾನ್ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದ ಕುರಿತು ಉಮಾಶಂಕರ್ ಪರಿಶೀಲನೆ ನಡೆಸುತ್ತಿದ್ದರು. ಘಟನೆಯಲ್ಲಿ ಉಮಾಶಂಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. … Read more