ಶಿವಮೊಗ್ಗದಲ್ಲಿ ನಡುರಾತ್ರಿ ಬಂದೂಕು ಹಿಡಿದು ಪೊಲೀಸರ ಕಾಲ್ನಡಿಗೆ ಗಸ್ತು, ಆಗಂತುಕರಿಗೆ ಮುಂದುವರೆದ ಶೋಧ
ಶಿವಮೊಗ್ಗ: ನಡುರಾತ್ರಿ ಮಾರಕಾಸ್ತ್ರ ಹಿಡಿದು ಆಗಂತುಕರು ಓಡಾಡಿದ್ದರಿಂದ ಒಡ್ಡಿನಕೊಪ್ಪ ಸಮೀಪದ ಪುಟ್ಟಪ್ಪ ಕ್ಯಾಂಪ್‌ನ ನಿವಾಸಿಗಳು ಆತಂಕಕ್ಕೀಡಾಗಿದ್ದರು. ಈ ಮಧ್ಯೆ ಪೊಲೀಸ್ ಇಲಾಖೆ ಸ್ಥಳೀಯರಿಗೆ ಅಭಯ ನೀಡಿದ್ದು, ಬಡಾವಣೆಯಲ್ಲಿ ಶಸ್ತ್ರಸಜ್ಜಿತವಾಗಿ ಗಸ್ತು (Patrol) ಆರಂಭಿಸಿದೆ. ಒಡ್ಡಿನಕೊಪ್ಪ ಸಮೀಪದ ಎನ್.ಆರ್.ಪುರ ರಸ್ತೆಗೆ ಹೊಂದಿಕೊಂಡಿರುವ ಪುಟ್ಟಪ್ಪ ಕ್ಯಾಂಪ್‌ನಲ್ಲಿ ಭಾನುವಾರ ರಾತ್ರಿ 1 ಗಂಟೆಗೆ ಆರು ದುಷ್ಕರ್ಮಿಗಳು ಮಾರಕಾಸ್ತ್ರ ಹಿಡಿದು ಓಡಾಡಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹತ್ತು ಮನೆ, 20 ಕುಟುಂಬ ಪುಟ್ಟಪ್ಪ ಕ್ಯಾಂಪ್‌ನಲ್ಲಿ ಕೆಲವೇ ವರ್ಷದ ಹಿಂದೆ ಬಡಾವಣೆ ನಿರ್ಮಾಣವಾಗಿದೆ. … Read more