‘ಡಾ. ಧನಂಜಯ ಸರ್ಜಿ ಈ ರೀತಿ ಮಾಡುತ್ತಾರೆ ಅಂದುಕೊಂಡಿರಲಿಲ್ಲ’, ಈ‍ಶ್ವರಪ್ಪ ಆಕ್ರೋಶ

Raghupath-Bhat-and-Eshwarappa-Press-meet-in-Shimoga

SHIVAMOGGA LIVE NEWS | 30 MAY 2024 SHIMOGA : ಮೇಲ್ಮನೆಗೆ ಆಯ್ಕೆಯಾಗುವವರು ತಮ್ಮ ಚಿಂತನೆಗಳ ಮೂಲಕ ಮತದಾರರನ್ನು (Voters) ಸೆಳೆಯಬೇಕಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತದಾರರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಬಿಜೆಪಿ ಪಾರ್ಟಿ, ಡಾ.ಸರ್ಜಿಯ ಗುಂಡು ಪಾರ್ಟಿ ಆಗಿದೆ. ಬಿಜೆಪಿ ಕಾರ್ಯಕರ್ತನಾದಾಗಿನಿಂದ ಈವರೆಗೆ ಹಲವು ಚುನಾವಣೆ ಎದುರಿಸಿ, ಗೆಲುವು ಸಾಧಿಸಿದ್ದೇವೆ. ಆದರೆ ದುರಾಭ್ಯಾಸಕ್ಕೆ ಮತದಾರರನ್ನು ತಳ್ಳಲಿಲ್ಲ. … Read more