24 ಗಂಟೆಯಲ್ಲಿ ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಮಟ್ಟ ಮೂರು ಅಡಿ ಹೆಚ್ಚಳ, ತುಂಗಾ ಡ್ಯಾಂನಿಂದ ಹೊರಹರಿವು ನಿರಂತರ

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಜುಲೈ 2021 ಕಳೆದ ಎರಡು ದಿನದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಹಳ್ಳ, ಕೊಳ್ಳಗಳು ತುಂಬಿಕೊಳ್ಳುತ್ತಿವೆ. ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೂ ಒಳ ಹರಿವು ಹೆಚ್ಚಳವಾಗಿದೆ. ಮೂರು ಅಡಿ ಏರಿದ ಲಿಂಗನಮಕ್ಕಿ ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ಗುರುವಾರ ನೀರಿನ ಮಟ್ಟ 1796 ಅಡಿಯಷ್ಟು ಇತ್ತು. ಇವತ್ತು 1799.15 ಅಡಿಗೆ ಏರಿಕೆಯಾಗಿದೆ. ಲಿಂಗನಮಕ್ಕಿಗೆ 73,431 ಕ್ಯೂಸೆಕ್ ಒಳಹರಿವು … Read more

ಗಂಟೆ ಗಂಟೆಗೂ ಹೆಚ್ಚಾಗ್ತಿದೆ ಗಾಜನೂರು ತುಂಗಾ ಜಲಾಶಯದ ಹೊರ ಹರಿವು

140621 Tunga Dam water outflow from 21 gates 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಹಿನ್ನೀರು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯದಿಂದ ಗಂಟೆ ಗಂಟೆಗೂ ಹೆಚ್ಚು ನೀರನ್ನು ಹೊರಗೆ ಬಿಡಲಾಗುತ್ತಿದೆ. ರಾತ್ರಿ 10 ಗಂಟೆಯಿಂದ ತುಂಗಾ ಡ್ಯಾಂನಿಂದ 56,500 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದರೆ ಮಳೆ ಹೆಚ್ಚಳವಾದ ಹಿನ್ನೆಲೆ ಹೊರ ಹರಿವು ಪ್ರಮಾಣ ಏರಿಕೆಯಾಗಲಿದೆ. ರಾತ್ರಿ 12 ಗಂಟೆಗೆ 61,500 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊಳೆಗೆ ಬಿಡಲು ತೀರ್ಮಾನಿಸಲಾಗಿದೆ. ಇವತ್ತು ಬೆಳಗ್ಗೆಯಿಂದ 41 ಸಾವಿರ ಕ್ಯೂಸೆಕ್‍ ಹೊರಹರಿವು … Read more

ಪುರಲೆ ಕೆರೆಯಲ್ಲಿ ಯುವಕನಿಗೆ ಶೋಧ, ಕಾರ್ಯಾಚರಣೆಗೆ ಮಳೆ ಅಡ್ಡಿ

220721 Purale Lake Youth Missing 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಯುವಕನೊಬ್ಬ ಪುರಲೆ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ಪುರಲೆ ನಿವಾಸಿ ಹರೀಶ್ ಎಂಬಾತ ನಾಪತ್ತೆಯಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ಆದರೆ ಜೋರು ಮಳೆ ಶೋಧ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ … Read more

ಶಿವಮೊಗ್ಗ ಸಿಟಿಯಲ್ಲಿ ಪುಷ್ಯಾ ಮಳೆ ಜೋರು, ಸಂಜೆಯಾಗುತ್ತಿದ್ದಂತೆ ಬಿರುಸು

Rain-At-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಶಿವಮೊಗ್ಗ ನಗರದಲ್ಲಿ ಪುಷ್ಯಾ ಮಳೆ ಜೋರಾಗಿದೆ. ಸಂಜೆಯಿಂದ ಮಳೆ ಬಿರುಸಾಗಿದ್ದು, ಜನರು ರಸ್ತೆಗಿಳಿಯುವುದಕ್ಕೆ ಹಿಂದೇಟು ಹಾಕುವಂತಾಗಿದೆ. ಬೆಳಗ್ಗೆಯಿಂದ ಮಳೆ ನಿರಂತರವಾಗಿ ಸುರಿಯುತ್ತಿದ್ದ್ದು, ಸಂಜೆ ವೇಳೆಗೆ ಬಿರುಸಾಗಿದೆ. ವರುಣನ ಅಬ್ಬರಕ್ಕೆ ಜನ ಜೀವನ ತತ್ತರಿಸಿತು. ಇದನ್ನೂ ಓದಿ | ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ, ಯಾರೆಲ್ಲ ಲಸಿಕೆ ಪಡೆಯಬಹುದು? ಸ್ಥಳ ಎಲ್ಲಿ? ಮಳೆ ಜೋರಾದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಶಿವಮೊಗ್ಗ … Read more

ಗಾಜನೂರಿನ ತುಂಗಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊಳೆಗೆ

140819 Drone Video Pradeep Tunga River 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಈ ನಡುವೆ ಹಿನ್ನೀರು ಭಾಗದಲ್ಲಿ ಜೋರು ಮಳೆ ಆಗುತ್ತಿರುವುದರಿಂದ ತುಂಗಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಅದರಂತೆ ಹೊರ ಹರಿವು ಕೂಡ ಏರಿಕೆಯಾಗಿದೆ. ಇದನ್ನೂ ಓದಿ | ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ, ಯಾರೆಲ್ಲ ಲಸಿಕೆ ಪಡೆಯಬಹುದು? ಸ್ಥಳ ಎಲ್ಲಿ? ಸಂಜೆ 6 ಗಂಟೆ ವೇಳೆಗೆ ತುಂಗಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. … Read more

ಶಿವಮೊಗ್ಗ ಜಿಲ್ಲೆಯ ಮೂರು ಜಲಾಶಯಗಳ ಒಳ ಹರಿವು ಹೆಚ್ಚಳ, ತುಂಗಾದಿಂದ ಸಾವಿರ ಸಾವಿರ ಕ್ಯೂಸೆಕ್ ಹೊರಹರಿವು

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಜುಲೈ 2021 ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಹೆಚ್ಚಾಗಿದೆ. ತುಂಗಾ ಜಲಾಶಯದಿಂದ ದೊಡ್ಡ ಪ್ರಮಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯ ಲಿಂಗನಮಕ್ಕಿ ಜಲಾಶಯಕ್ಕೆ 45,458 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಇದರಿಂದ ಜಲಾಶಯದ ನೀರಿನ ಮಟ್ಟ 1796 ಮಿ.ಮೀ.ಗೆ ಏರಿಕೆಯಾಗಿದೆ. ಭದ್ರಾ ಡ್ಯಾಂ ಭದ್ರಾ ಜಲಾಶಯಕ್ಕೆ 15,668 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಡ್ಯಾಂನ ನೀರಿನ ಮಟ್ಟ 167.11 ಅಡಿಗೆ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ರಾತ್ರಿಯಿಂದ ಬಿಡುವು ಕೊಡದೆ ಸುರಿಯುತ್ತಿದೆ ಮಳೆ

180721 Rain At Shimoga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 18 ಜುಲೈ 2021 ಕಳೆದ ಎರಡು ದಿನದಿಂದ ಕಡಿಮೆಯಾಗಿದ್ದ ವರುಣ ಪುನಃ ಪ್ರತ್ಯಕ್ಷವಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯದ್ಯಂತ ರಾತ್ರಿಯಿಂದ ಮಳೆ ಪುನಾರಂಭವಾಗಿದೆ. ಜೋರು ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ. ಶಿವಮೊಗ್ಗದಲ್ಲಿ ಬೆಳಗ್ಗೆಯಿಂದ ನಿರಂತರ ಮಳೆಯಾಗುತ್ತಿದೆ. ಕೆಲ ಹೊತ್ತು ಜೋರಾಗಿ ಸುರಿಯುವ ಮಳೆ, ಬಳಿಕ ಜಿಟಿಜಿಟಿಯಾಗಿ ಬೀಳುತಿತ್ತು. ಬಳಿಕ ಜೋರು ಮಳೆ ಆರಂಭವಾಗಿದೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಆತಂಕ ಉಂಟಾಗಿದೆ. ಸ್ಮಾರ್ಟ್ ಸಿಟಿ … Read more

ಭಾರಿ ಮಳೆಗೆ ಸಾಗರದಲ್ಲಿ ಧರೆ ಕುಸಿತ, ಎರಡು ಕಡೆ ಮನೆಗಳಿಗೆ ಹಾನಿ

160721 Sagara Arehada Rain Effect 1

ಶಿವಮೊಗ್ಗ ಲೈವ್.ಕಾಂ | SAGARA NEWS | 16 ಜುಲೈ 2021 ಭಾರಿ ಮಳೆಗೆ ಸಾಗರ ತಾಲೂಕಿನಲ್ಲಿ ಮನೆಯ ಗೋಡೆ ಮತ್ತು ಧರೆ ಕುಸಿದ ವರದಿಯಾಗಿದೆ. ತಾಲೂಕಿನ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಹದ ಗ್ರಾಮದಪ್ಪಿ ಭಾರಿ ಮಳೆಗೆ ತೋಟದ ಮೇಲಿನ ಧರೆ ಕುಸಿದಿದೆ. ಅರೆಹದ ಗ್ರಾಮದ ಸರ್ವೇ ನಂ. 72ರಲ್ಲಿ ಎಂ.ಆರ್.ಸುಬ್ಬರಾವ್ ಎಂಬುವವರಿಗೆ ಸೇರಿದ ಅಡಕೆ ತೋಟದ ಮೇಲ್ಬಾಗದ ಸುಮಾರು 30 ಅಡಿ ಎತ್ತರದ ಧರೆ ಕುಸಿದಿದ್ದು. ಅಡಕೆ ಮರಗಳು ಹಾನಿಯಾಗಿವೆ. ಸುಮಾರು 35 ಅಡಿಯಷ್ಟು … Read more

ಮಳೆ ಕಡಿಮೆಯಾದಂತೆ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ ಹರಿವು ಇಳಿಕೆ, ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ?

140621 Tunga Dam water outflow from 21 gates 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತಗ್ಗುತ್ತಿದ್ದಂತೆ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ತುಂಗಾ ಜಲಾಶಯದ ಹೊರ ಹರಿವು ಕೂಡ ಕಡಿಮೆಯಾಗಿದೆ. ಲಿಂಗನಮಕ್ಕಿ ಜಲಾಶಯದ ಒಳ ಹರಿವು 34,905 ಕ್ಯೂಸೆಕ್‍ಗೆ ಇಳಿಕೆಯಾಗಿದೆ. ಹಾಗಾಗಿ ಜಲಾಶಯದ ನೀರಿನ ಮಟ್ಟ 1789.55 ಅಡಿಗಳಷ್ಟಿದೆ. ಇದನ್ನೂ ಓದಿ | ಶಿವಮೊಗ್ಗ ಜಿಲ್ಲೆಯಾದ್ಯಂತ ತಗ್ಗಿದ ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಇನ್ನು, ಭದ್ರಾ ಜಲಾಶಯಕ್ಕೂ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ತಗ್ಗಿದ ಮಳೆ, 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

Shivamogga Rain General Image DVS Road 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ಶಿವಮೊಗ್ಗದ ಜಿಲ್ಲೆಯ ವಿವಿಧೆಡೆ ಇವತ್ತು ಮಳೆ ಪ್ರಮಾಣ ತಗ್ಗಿದೆ. ತಂಡಿ ಗಾಳಿ ಬೀಸುತ್ತಿದ್ದು, ಆಗಾಗ ಜಿಟಿಜಿಟಿ ಮಳೆಯಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 13.21 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 3.80 ಮಿ.ಮೀ, ಭದ್ರಾವತಿಯಲ್ಲಿ 5.60 ಮಿ.ಮೀ, ತೀರ್ಥಹಳ್ಳಿಯಲ್ಲಿ 46.80 ಮಿ.ಮೀ, ಸಾಗರದಲ್ಲಿ 17.40 ಮಿ.ಮೀ, ಶಿಕಾರಿಪುರದಲ್ಲಿ 3.70 ಮಿ.ಮೀ, ಸೊರಬದಲ್ಲಿ 15.20 ಮಿ.ಮೀ, ಹೊಸನಗರದಲ್ಲಿ 98.80 ಮಿ.ಮೀ ಮಳೆಯಾಗಿದೆ. ತಗ್ಗಿದ … Read more