ಶಿವಮೊಗ್ಗದಲ್ಲಿ ಇವತ್ತು ತೇಜಸ್ವಿನಿ ರಂಗಪ್ರವೇಶ, ಎಲ್ಲಿ? ಎಷ್ಟೊತ್ತಿಗೆ ಕಾರ್ಯಕ್ರಮ?
ಶಿವಮೊಗ್ಗ: ನಗರದ ನಟನಂ ಬಾಲ ನಾಟ್ಯ ಕೇಂದ್ರದ ವಿದ್ಯಾರ್ಥಿನಿ ಎನ್.ಪಿ.ತೇಜಸ್ವಿನಿ ಅವರ ಭರತನಾಟ್ಯ (Bharatanatyam) ರಂಗಪ್ರವೇಶ ಕಾರ್ಯಕ್ರಮವನ್ನು ಸೆ.14ರಂದು ಸಂಜೆ 5.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ. ಎಸ್.ಕೇಶವಕುಮಾರ್ ಪಿಳ್ಳೈ ತಿಳಿಸಿದರು. ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಂಗಪ್ರವೇಶ ನಮ್ಮ ಕೇಂದ್ರದ 22ನೇ ರಂಗ ಪ್ರವೇಶ ಕಾರ್ಯಕ್ರಮವಾಗಿದೆ. ತೇಜಸ್ವಿನಿ ಎರಡನೆ ತರಗತಿಯಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರೂ ಆಗಿದ್ದಾರೆ ಎಂದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ … Read more