ಶಿಕಾರಿಪುರದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ, ಆಗಿದ್ದೇನು?
ಶಿಕಾರಿಪುರ: ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ (Decomposed Body) ಪತ್ತೆಯಾಗಿದೆ. ಕಳೆದ ಕೆಲವು ದಿನಗಳಿಂದ ಈ ವ್ಯಕ್ತಿ ಕಾಣೆಯಾಗಿದ್ದು, ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಇದೀಗ ತಾಂಡಾದ ಸಮೀಪವೇ ಶವ ಪತ್ತೆಯಾಗಿದೆ. ರುಕ್ಮಪ್ಪ (50) ಮೃತರು. ಗ್ರಾಮದ ಜಮೀನಿನ ಬಳಿ ತೀವ್ರ ವಾಸನೆ ಬರುತ್ತಿದ್ದ ಕಾರಣ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವು ಸಂಪೂರ್ಣವಾಗಿ ಕೊಳೆತು ಹೋಗಿದೆ. ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ. … Read more