ಸಿಗಂದೂರು ರಸ್ತೆಯಲ್ಲಿ ಹಿಟ್ ಅಂಡ್ ರನ್, ಪಾದಚಾರಿ ಸ್ಥಳದಲ್ಲೇ ಸಾವು
ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜುಲೈ 2021 ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರದ ಸಿಗಂದೂರು ರಸ್ತೆಯ ಸಂಜಯ್ ಮೆಮೋರಿಯಲ್ ಕಾಲೇಜು ಬಳಿ ಘಟನೆ ಸಂಭವಿಸಿದೆ. ಆದಿಶಕ್ತಿ ನಗರದ ಬಾಬು (47) ಎಂಬಾತ ಮೃತ ದುರ್ದೈವಿ. ಸಂಜೆ ಘಟನೆ ಸಂಭವಿಸಿದೆ. ಬಾಬು ಅವರು ನಡೆದು ಹೋಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಾಬು ಗಂಭೀರ ಗಾಯಗೊಂಡಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ವಾಹನ ಪರಾರಿಯಾಗಿದೆ. ಸಾಗರ ಠಾಣೆ ಇನ್ಸ್ಪೆಕ್ಟರ್ … Read more