ಪೂಜೆಗೆಂದು ಅರ್ಚಕರು ಬೆಳಗ್ಗೆ ದೇಗುಲಕ್ಕೆ ಬಂದಾಗ ಕಾದಿತ್ತು ಆಘಾತ

281123-Anandapura-Police-Station-Board.webp

SAGARA, 7 AUGUST 2024 : ಆನಂದಪುರ ನರಸೀಪುರದ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ (Temple) ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ದೇವಾಲಯದ ಬೀಗ ಮುರಿಯಲು ಯತ್ನಿಸಿ ತಿರುಚಿದ್ದಾರೆ. ಕಿಟಕಿ ಬಾಗಿಲು ತೆರೆದು ಸರಳುಗಳನ್ನು ಬಗ್ಗಿಸಲಾಗಿದೆ. ದೇವಾಲಯ ಊರಿನ ಒಳಗೆ ಇರುವ ಕಾರಣ ಬೀಗ ಒಡೆಯುವ ಶಬ್ದ ಗ್ರಾಮಸ್ಥ ರಿಗೆ ಕೇಳಿಸಬಹುದು ಎಂದು ಹೆದರಿ ಕಳ್ಳರು ಪರಾರಿಯಾಗಿದ್ದಾರೆ. ಬೆಳಗ್ಗೆ ಅರ್ಚಕರು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ ⇓ ಗುಡ್‌ ಮಾರ್ನಿಂಗ್‌ … Read more

ಚಲಿಸುತ್ತಿದ್ದ ಬಸ್ಸಿನಲ್ಲಿ ದಿಢೀರ್‌ ಬೆಂಕಿ, ಕ್ಷಣ ಹೊತ್ತಲ್ಲೇ ಧಗಧಗ ಹೊತ್ತಿ ಉರಿದ ವಾಯುವ್ಯ ಸಾರಿಗೆ

vayuvya-sarige-bus-burnt-at-sagara-on-jog-road

SAGARA, 6 AUGUST 2024 : ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ (Bus) ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ಬಸ್‌ ಹೊತ್ತಿ ಉರಿದಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಾಗರ ಪಟ್ಟಣದ ಜೋಗ ರಸ್ತೆಯ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಘಟನೆ ಸಂಭವಿಸಿದೆ. ಭಟ್ಕಳದಿಂದ ಸಾಗರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೆ ಬಸ್ಸನ್ನು ನಿಲ್ಲಿಸಿದ್ದು, ಎಲ್ಲಾ 12 ಪ್ರಯಾಣಿಕರು ಬಸ್ಸಿನಿಂದ ಕೆಳಗೆಳಿದಿದ್ದಾರೆ. ಬಸ್‌ನ ಬಹು ಭಾಗ ಹೊತ್ತಿ ಉರಿದಿದೆ ಎಂದು … Read more

ಶಿವಮೊಗ್ಗ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಆಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗೆ ಮೀಸಲು ಪ್ರಕಟ

VIDHANA-SOUDHA-GENERAL-IMAGE.jpg

SHIMOGA, 5 AUGUST 2024 : ವಿವಿಧ ಜಿಲ್ಲೆಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲು (Reservation) ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ವಿವಿಧ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳಿಗು ಮೀಸಲು ಪ್ರಕಟಿಸಲಾಗಿದೆ. ಎಲ್ಲೆಲ್ಲಿಗೆ ಮೀಸಲಾತಿ ಪ್ರಕಟವಾಗಿದೆ? » ಭದ್ರಾವತಿ ನಗರಸಭೆ – ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು. » ಸಾಗರ ನಗರಸಭೆ – ಅಧ್ಯಕ್ಷ ಸ್ಥಾನವನ್ನು ಜನರಲ್ ಮಹಿಳೆ, … Read more

ಲಿಂಗನಮಕ್ಕಿ ಜಲಾಶಯ ಶೇ.86ರಷ್ಟು ಭರ್ತಿ, ಇವತ್ತು ಭಾರಿ ಪ್ರಮಾಣದ ಒಳ ಹರಿವು, ಎಷ್ಟಿದೆ?

-Linganamakki-Dam-General-Image

SAGARA, 31 JULY 2024 : ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು ಲಿಂಗನಮಕ್ಕಿ ಜಲಾಶಯದ ಒಳ ಹರಿವು (Inflow) ಏರಿಕೆಯಾಗಿದೆ. ಇವತ್ತು 82,587 ಕ್ಯೂಸೆಕ್‌ ಒಳ ಹರಿವು ಇದೆ. ಕಳೆದ 24 ಗಂಟೆಯಲ್ಲಿ ಡ್ಯಾಂನ ನೀರಿನ ಮಟ್ಟ 2.15 ಅಡಿಯಷ್ಟು ಏರಿಕೆಯಾಗಿದೆ. ನೀರಿನ ಮಟ್ಟ 1812.65 ಅಡಿಗೆ ತಲುಪಿದೆ. ಪ್ರಸ್ತುತ ಜಲಾಶಯವು ಶೇ.86.51ರಷ್ಟು ಭರ್ತಿಯಾಗಿದೆ. ಇದನ್ನೂ ಓದಿ ⇓ ರಾತ್ರಿ ಶಿವಮೊಗ್ಗದ ವಿದ್ಯಾನಗರ ಸೇರಿ ವಿವಿಧೆಡೆ ಎಚ್ಚರಿಕೆ ಸಂದೇಶ, ಕೂಡ್ಲಿಯಲ್ಲಿ ಸ್ನಾನ ಘಟ್ಟ ಜಲಾವೃತ ತುಂಗಾ, ಭದ್ರಾ … Read more

ಲಿಂಗನಮಕ್ಕಿ ಡ್ಯಾಂನಿಂದ ನೀರು ಬಿಡುವ ದಿನಾಂಕ ಪ್ರಕಟ, ಹಳ್ಳಿ ಹಳ್ಳಿಗೆ ತೆರಳಿ ಮೈಕ್‌ನಲ್ಲಿ ಎಚ್ಚರಿಕೆ ಸಂದೇಶ

linganamakki-dam-mike-announcement

SAGARA, 30 JULY 2024 : ಧಾರಾಕಾರ ಮಳೆಗೆ ಲಿಂಗನಮಕ್ಕಿ ಜಲಾಶಯದ (DAM) ಒಳ ಹರಿವು ಹೆಚ್ಚಳವಾಗಿದೆ. ಯಾವುದೇ ಸಂದರ್ಭ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ, ಹಳ್ಳಿಗೆ ಹಳ್ಳಿಗೆ ತೆರಳಿ ಮೈಕ್‌ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ. ಭರ್ತಿಯ ಸನಿಹಕ್ಕೆ ಲಿಂಗನಮಕ್ಕಿ ಡ್ಯಾಂ ಲಿಂಗನಮಕ್ಕಿ ಜಲಾಶಯು ಭರ್ತಿಯ ಸನಿಹಕ್ಕೆ ತಲುಪಿದೆ. ಡ್ಯಾಂನ ಗರಿಷ್ಠ ನೀರಿನ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1811.50 ಅಡಿಗೆ ತಲುಪಿದೆ. ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹಾಗಾಗಿ … Read more

ಲಿಂಗನಮಕ್ಕಿ ಜಲಾಶಯದಲ್ಲಿ ಗಂಗೆ ಪೂಜೆ, ಶರಾವತಿಗೆ ಬಾಗಿನ ಅರ್ಪಣೆ, ಗೇಟ್‌ ಮೇಲೆತ್ತಿ ನೀರು ಹೊರಕ್ಕೆ

Linganamakki-dam-gange-pooje

SAGARA, 26 JULY 2024 : ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಲಿಂಗನಮಕ್ಕಿ ಜಲಾಶಯ (LINGANAMAKKI DAM) ಭರ್ತಿಯಾಗುವ ಹಂತಕ್ಕೆ ತಲುಪಿದೆ. ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆ ಇವತ್ತು ಗಂಗೆ ಪೂಜೆ ನೆರವೇರಿಸಲಾಯಿತು. ಅಲ್ಲದೆ ಒಂದು ಗೇಟ್ ಮೂಲಕ ಸಾಂಪ್ರದಾಯಿಕವಾಗಿ ನೀರನ್ನು ಹೊರ ಬಿಡಲಾಯಿತು. ಅಧಿಕಾರಿಗಳಿಂದ ಗಂಗೆ ಪೂಜೆ ಲಿಂಗನಮಕ್ಕಿ ಜಲಾಶಯ ಭರ್ತಿಯಾಗುವ ಹಂತ ತಲುಪಿದ ಹಿನ್ನೆಲೆ ಇವತ್ತು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಗಂಗೆ ಪೂಜೆ ನೆರವೇರಿಸಿದರು. ಜಲಾಶಯದಲ್ಲಿ ಪೂಜೆ ಸಲ್ಲಿಸಿ, … Read more

BREAKING NEWS – ಹೆದ್ದಾರಿಯಲ್ಲಿ ಬಸ್‌ ಮೇಲೆ ಬಿದ್ದ ಮರ, ಚಾಲಕನ ಸಮಯಪ್ರಜ್ಞೆಗೆ ತಪ್ಪಿತು ಅನಾಹುತ

Tree Falls on bus near kaspadi in Sagara

SAGARA, 26 JULY 2024 : ಚಲಿಸುತ್ತಿದ್ದ KSRTC ಬಸ್‌ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್‌ ಪ್ರಯಾಣಿಕರು ಪರಾಗಿದ್ದಾರೆ. ಸಾಗರ ಸಮೀಪ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಕಾಸ್ಪಾಡಿ – ಸಾಗರ ಮಧ್ಯೆ ಹೆದ್ದಾರಿಯಲ್ಲಿ ದಿಢೀರನೆ ಮರ ಧರೆಗುರುಳಿದೆ. ಇದನ್ನು ಗಮನಿಸಿದ ಬಸ್‌ ಚಾಲಕ ಕೂಡಲೆ ಬಸ್ಸನ್ನು ರಸ್ತೆಯ ಎಡಬದಿಗೆ ತಿರುಗಿಸಿದ್ದಾರೆ. ಹಾಗಾಗಿ ದೊಡ್ಡ ಅನಾಹುತ ತಪ್ಪಿದೆ. ಬಸ್ಸು ರಸ್ತೆ ಪಕ್ಕದ ಚರಂಡಿಗೆ ಇಳಿದಿದೆ. ಬಸ್ಸು ಯಲ್ಲಾಪುರದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಮರ ಧರೆಗುರುಳಿದ್ದರಿಂದ ಸಾಗರ ಸಮೀಪ … Read more

ಚಲಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ | ಜೋಗ ಬಳಿ ಸಿಕ್ಕಿಬಿದ್ದ ವಾಹನ ಚಾಲಕನಿಗೆ 10 ಸಾವಿರ ದಂಡ – 3 ಫಟಾಫಟ್‌ ನ್ಯೂಸ್‌

crime name image

SHIVAMOGGA LIVE NEWS | 23 JULY 2024 CRIME NEWS : ಚಲಿಸುತ್ತಿದ್ದ ಕಾರಿನ ಮೇಲೆ ಮರ (tree) ಬಿದ್ದು ಮೂವರು ಗಾಯಗೊಂಡಿದ್ದಾರೆ. ಜೋಗ ಬಳಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ವಾಹನ ಸವಾರನಿಗೆ ದಂಡ. ಇಲ್ಲಿದೆ ಮೂರು ಫಟಾಫಟ್‌ ಕ್ರೈಮ್‌ ನ್ಯೂಸ್‌ ಇದನ್ನೂ ಓದಿ ⇓ ಗಾಳಿ, ಮಳೆಗೆ ಹಾರಿಹೋಯ್ತು ಸರ್ಕಾರಿ ಶಾಲೆಯ ಶೆಡ್‌, ತಪ್ಪಿತು ದೊಡ್ಡ ಅನಾಹುತ

ಗಾಳಿ, ಮಳೆಗೆ ಹಾರಿಹೋಯ್ತು ಸರ್ಕಾರಿ ಶಾಲೆಯ ಶೆಡ್‌, ತಪ್ಪಿತು ದೊಡ್ಡ ಅನಾಹುತ

School-Tent-falls-in-Sagara-teacher-injured

SHIVAMOGGA LIVE NEWS | 23 JULY 2024 ANANDAPURA : ಗಾಳಿ, ಮಳೆಗೆ ಶೆಡ್‌ (SHED) ಮುರಿದು ಮಕ್ಕಳು, ಶಿಕ್ಷಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಆನಂದಪುರ ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌರಿಹಳ್ಳದಲ್ಲಿ ಘಟನೆ ಸಂಭವಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಎಲ್‌ಕೆಜಿ ವಿಭಾಗದ ಶೆಡ್ ಸೋಮವಾರ ಗಾಳಿ-ಮಳೆಗೆ ಹಾರಿಹೋಗಿದೆ. 2 ವರ್ಷಗಳ ಹಿಂದೆ ಶಾಲೆಯಲ್ಲಿ ಎ ಸಲಾಗಿತ್ತು. ಕೊಠಡಿ ಮಂಜೂರಾಗದ ಕಾರಣ ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಂಡಿದ್ದರು. ಈಗ ಶೆಡ್ ಮೇಲ್ಪಾವಣಿ ಹಾರಿ … Read more

ಧರೆ ಕುಸಿದು ತೋಟ ಜಲಾವೃತ, ಸಾಗರದಲ್ಲಿ ಸಹಾಯವಾಣಿ ಆರಂಭ, ತಾಲೂಕಿನಲ್ಲಿ ಎಷ್ಟೆಲ್ಲ ಹಾನಿಯಾಗಿದೆ?

Sagara-Rain-effect-thumbnail

SHIVAMOGGA LIVE NEWS | 19 JULY 2024 SAGARA NEWS : ಈ ಬಾರಿ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ (Rain). ಇದರಿಂದ ವಿವಿಧೆಡೆ ಧರೆ ಕುಸಿತ, ಆಸ್ತಿಪಾಸ್ತಿ ಹಾನಿಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದೆ. ಸಾಗರ ತಾಲೂಕಿನಲ್ಲಿ ಜುಲೈ ತಿಂಗಳ ವಾಡಿಕೆ ಮಳೆ 847.70 ಮಿ.ಮೀ. ಆದರೆ ಈವರೆಗೂ ತಾಲೂಕಿನಲ್ಲಿ 1071.40 ಮಿ.ಮೀ ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಹಾನಿಯ ಭೀತಿ ಎದುರಾಗಿದೆ. ಇದನ್ನೂ ಓದಿ ⇓ ಶಿವಮೊಗ್ಗ ಜಿಲ್ಲೆಗೆ … Read more