ಸಕ್ರೆಬೈಲು ಸಮೀಪ ಕೆಟಿಎಂ ಬೈಕ್‌ ಅಪಘಾತ, ಶಿವಮೊಗ್ಗದ ಕಾಲೇಜು ವಿದ್ಯಾರ್ಥಿನಿ ತಲೆಗೆ ಪೆಟ್ಟು

ACCIDENT-NEWS-GENERAL-IMAGE.

SHIVAMOGGA LIVE NEWS | 9 DECEMBER 2023 SHIMOGA : ಸಕ್ರೆಬೈಲು ಸಮೀಪ ಕೆಟಿಎಂ ಬೈಕ್‌ ಅಪಘಾತಕ್ಕೀಡಾಗಿ ವಿದ್ಯಾರ್ಥಿನಿಯೊಬ್ಬಳಿಗೆ ಗಂಭೀರ ಗಾಯವಾಗಿದೆ. ಆಕೆಯನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಗರದ ಸರ್ಕಾರಿ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ ಭದ್ರಾವತಿಯ ಗ್ರಾಮವೊಂದರ ವಿದ್ಯಾರ್ಥಿನಿ ಮತ್ತು ಎಟಿಎನ್‌ಸಿ ಕಾಲೇಜು ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಇಬ್ಬರು ಸ್ನೇಹಿತರೊಂದಿಗೆ ಕೆಟಿಎಂ ಬೈಕ್‌ನಲ್ಲಿ ಸಕ್ರೆಬೈಲಿಗೆ ತೆರಳಿದ್ದು ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಕೂಡಲೆ ಇಬ್ಬರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು … Read more

ನೇತ್ರಾವತಿ ಆನೆ ಗರ್ಭಿಣಿ ಅನ್ನುವುದೇ ಯಾರಿಗೂ ಗೊತ್ತಿರಲಿಲ್ಲ..! ಶಿವಮೊಗ್ಗದಲ್ಲಿ ನಡೆಯುತ್ತಾ ಜಂಬೂ ಸವಾರಿ?

Sakrebyle-elephant-gave-birth-to-calf-in-dasara-in-Shimoga.webp

SHIVAMOGGA LIVE NEWS | 24 OCTOBER 2023 SHIMOGA : ನೇತ್ರಾವತಿ ಆನೆ ‘ದಿಢೀರ್‌’ ಮರಿ ಹಾಕಿದ ಬೆನ್ನಿಗೆ ಶಿವಮೊಗ್ಗದಲ್ಲಿ ಜಂಬೂ ಸವಾರಿ ನಡೆಯಲಿದೆಯೆ ಎಂಬ ಅನುಮಾನ ಮೂಡಿದೆ. ಈ ಮಧ್ಯೆ ನೇತ್ರಾವತಿ ಮತ್ತು ಮರಿಯನ್ನು ಸಕ್ರೆಬೈಲಿಗೆ ಕರೆದೊಯ್ಯಲಾಗಿದೆ. ಮತ್ತೊಂದೆಡೆ ಗರ್ಭವತಿಯಾದ (Pregnancy) ಆನೆಯನ್ನು ತಾಲೀಮಿಗೆ ಕರೆತಂದಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಕ್ರೆಬೈಲಿಗೆ ಆನೆ, ಮರಿ ಕಳೆದ ರಾತ್ರಿ ವಾಸವಿ ಶಾಲೆ ಆವರಣದಲ್ಲಿ ಸಕ್ರೆಬೈಲಿನ ನೇತ್ರಾವತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ. … Read more

ಸಕ್ರೆಬೈಲು ಬಿಡಾರದ ಆನೆ ಬಾಲ ಕಟ್‌, ಹರಿತ ಆಯುಧದಿಂದ ದಾಳಿ ಶಂಕೆ, ಕಾರಣವೇನು?

181023_-Sakrebyle-Elephant-Bhanumathi-tail-issue-in-Shimoga.webp

SHIVAMOGGA LIVE NEWS | 18 OCTOBER 2023 SHIMOGA : ಕಳೆದ ವರ್ಷ ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಕ್ರೆಬೈಲಿನ ಭಾನುಮತಿ ಆನೆಯ (Elephant) ಬಾಲಕ್ಕೆ ಹರಿತವಾದ ಆಯುಧದಿಂದ ಹೊಡೆದು ಗಾಯಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಭಾನುಮತಿ ಆನೆ (Elephant) ತುಂಬು ಗರ್ಭಿಣಿಯಾಗಿದ್ದು ಪ್ರಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ಭಾನುಮತಿ ಆನೆಯ ಬಾಲಕ್ಕೆ ಚೂಪಾದ ಆಯುಧದಿಂದ ಹೊಡೆಯಲಾಗಿದೆ. ಬಾಲಕ್ಕೆ ಗಂಭೀರ ಗಾಯವಾಗಿದೆ. ಸಕ್ರೆಬೈಲು ಬಿಡಾರದ ವೈದ್ಯರು ಭಾನುಮತಿಗೆ ಚಿಕಿತ್ಸೆ … Read more

ಸಕ್ರೆಬೈಲು ಆನೆ ಬಿಡಾರದಲ್ಲಿ ಸ್ವಚ್ಚತಾ ಹಿ ಸೇವಾ ಅಭಿಯಾನ

Swachata-Abhiyana-in-Sakrebyle

SHIVAMOGGA LIVE NEWS | 28 SEPTEMBER 2023 SHIMOGA : ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು (Cleanliness) ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ಲಾಸ್ಟಿಕ್ ಬಳಕೆ ನಿಲ್ಲಿಸುವ ಕುರಿತು ಜನಾಂದೋಲನ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಹೇಳಿದರು ಸ್ವಚ್ಚತಾ ಹಿ ಸೇವಾ ಅಭಿಯಾನದ ಅಡಿ ಸಕ್ರೈಬೈಲು ಆನೆ ಬಿಡಾರದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಪ್ಲಾಸ್ಟಿಕ್‍ನಿಂದ ಆರೋಗ್ಯದ ಮೇಲೆ, ಪರಿಸರ, ವನ್ಯಜೀವಿಗಳ ಮೇಲೆ ಆಗುತ್ತಿರುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಬೇಕಾಗಿದೆ … Read more

ಮೈಸೂರು ದಸರಾ ಜಂಬೂ ಸವಾರಿಗೆ ಶಿವಮೊಗ್ಗದ ಸಕ್ರೆಬೈಲು ಆನೆ

Jamboo-Savaari-in-Shimoga

SHIVAMOGGA LIVE NEWS | 8 AUGUST 2023 SHIMOGA : ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ (JAMBOO SAVARI) ಈ ಬಾರಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದಲೂ (ELEPHANT CAMP) ಆನೆಗಳನ್ನು ಕರೆದುಕೊಂಡು ಹೋಗಲು ಸಿದ್ಧತೆ ನಡೆಯುತ್ತಿದೆ. ಪ್ರತಿ ಬಾರಿ ಜಂಬೂ ಸವಾರಿಗಾಗಿ (JAMBOO SAVARI) ಕೊಡಗಿನ ದುಬಾರೆ, ಚಾಮರಾಜನಗರದ ಕೆ.ಗುಡಿ, ಬಂಡೀಪುರದ ರಾಮಾಪುರ, ನಾಗರಹೊಳೆಯ ಮತ್ತಿಗೋಡು, ಬಳ್ಳೆ ಶಿಬಿರಗಳಲ್ಲಿ ಆನೆಗಳಿಗೆ ಪರಿಶೀಲನೆ ನಡೆಸಲಾಗುತ್ತದೆ. ಅರಣ್ಯಾಧಿಕಾರಿ, ವನ್ಯಜೀವಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ತೆರಳಿ ಆನೆಗಳ … Read more

ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಭೀಕರ ಅಪಘಾತ, ನುಜ್ಜುಗುಜ್ಜಾದ ಕಾರು, ಚಾಲಕ ಸಾವು, ಹೇಗಾಯ್ತು ಘಟನೆ?

Car-Bus-Accident-at-Sakrebyle-in-Shimoga-Thirthahalli-Road-Today.

SHIVAMOGGA LIVE | 4 JULY 2023 SHIMOGA : ಕಾರು ಮತ್ತು ಖಾಸಗಿ ಬಸ್‌ (Private Bus) ಡಿಕ್ಕಿಯಾಗಿದ್ದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಕ್ರೆಬೈಲು ಸಮೀಪ ಘಟನೆ ಸಂಭವಿಸಿದೆ. ಕಾರು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿತ್ತು ಎಂದು ಹೇಳಲಾಗುತ್ತಿದೆ. ಬಸ್ಸು ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆಗೆ ಸಾಗುತ್ತಿತ್ತು. ಕಾರಿನಲ್ಲಿದ್ದ ಮೂವರ ಪೈಕಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿ ಮತ್ತು ಗಾಯಾಳುಗಳ ಗುರುತು ಇನ್ನಷ್ಟೆ … Read more

ತೀರ್ಥಹಳ್ಳಿಗೆ ನುಗ್ಗಿದ್ದ ಕಾಡಾನೆ 3 ತಿಂಗಳ ಬಳಿಕ ‘ಅರೆಸ್ಟ್’, ಹೆಣ್ಣಾನೆ ಮೋಹಕ್ಕೆ ಬಿದ್ದ ಸಲಗ ‘ಹನಿ ಟ್ರ್ಯಾಪ್’

Wild-Elephant-Honey-trapped-in-Thirthahalli-Devangi

SHIVAMOGGA LIVE NEWS | 31 MARCH 2023 THIRTHAHALLI : ಪಟ್ಟಣದೊಳಗೆ ನುಗ್ಗಿ ಆತಂಕ ಮೂಡಿಸುತ್ತಿದ್ದ ಕಾಡಾನೆಯನ್ನು (Elephant) ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ತೀರ್ಥಹಳ್ಳಿ ತಾಲೂಕು ದೇವಂಗಿಯ ಮಳಲೂರು ಕಾಡಿನಲ್ಲಿ ಆನೆ ಸೆರೆ ಸಿಕ್ಕಿದೆ. ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿದ ಸಕ್ರೆಬೈಲು ಬಿಡಾರದ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಯನ್ನು (Elephant) ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆನೆ ಕಾಣಿಸಿಕೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗೆ ಮತ್ತು ಬರುವ ಇಂಜೆಕ್ಷನ್ ಡಾರ್ಟ್ ಮಾಡಿ … Read more

ವಾಹನ ಡಿಕ್ಕಿಯಾಗಿ ಬಿದ್ದು ನರಳಾಡುತ್ತಿದ್ದ ಜಿಂಕೆಗೆ ನೆರವಾದ ಜನ, ಫೋಟೊಗಳು VIRAL

People-helps-injured-deer-at-Sakrebyle

SHIVAMOGGA LIVE NEWS | 6 FEBRUARY 2023 SHIMOGA | ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿಯಾಗಿ ಬಿದ್ದು ನರಳಾಡುತ್ತಿದ್ದ ಜಿಂಕೆಗೆ (DEER) ಸ್ಥಳೀಯರು ಆರೈಕೆ ಮಾಡಿ, ಮಾನವೀಯತೆ ಮೆರೆದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ. ಶಿವಮೊಗ್ಗ ತಾಲೂಕು ಸಕ್ರೆಬೈಲು ಬಳಿ ರಸ್ತೆ ದಾಟುತ್ತಿದ್ದ ಜಿಂಕೆಗೆ ವಾಹನ ಡಿಕ್ಕಿಯಾಗಿದೆ. ಜಿಂಕೆಗೆ ತೀವ್ರ ಪೆಟ್ಟಾಗಿದ್ದು ಮೇಲೇಳಲಾಗದೆ ಒದ್ದಾಡುತ್ತಿತ್ತು. ಕೂಡಲೆ ನೆರವಿಗೆ ಧಾವಿಸಿದ ಸ್ಥಳೀಯರು ಮತ್ತು ವಾಹನ ಸವಾರರು, ಜಿಂಕೆಗೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಇದನ್ನೂ … Read more

ಸಕ್ರೆಬೈಲಿನ ಸೂರ್ಯ 3000 ಕಿ.ಮೀ ದೂರದ ಕಾಡಿಗೆ ವರ್ಗ, ಸಿಬ್ಬಂದಿ ಜೊತೆ ಕೊನೆಯ ಫೋಟೊ

Surya-Elephant-to-be-transferred-to-Uttar-Pradesh

SHIVAMOGGA LIVE NEWS | 2 NOVEMBER 2022 SHIMOGA | ಸಕ್ರೆಬೈಲು ಆನೆ ಬಿಡಾರದ ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ (elephant transfer). ಬಿಡಾರದ ಸಿಬ್ಬಂದಿ ಸೂರ್ಯನೊಂದಿಗೆ ಕೊನೆಯ ಫೋಟೊ ಕ್ಲಿಕ್ಕಿಸಿಕೊಂಡು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಿದರು. ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಫಿಲಿಬಿಟ್ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ. ಈಗಾಗಲೆ ಅಲ್ಲಿಂದ ಲಾರಿ ಆಗಮಿಸಿದ್ದು ಸೂರ್ಯ ಆನೆಯನ್ನು ಲಾರಿ ಹತ್ತಿಸಲಾಗಿದೆ. (elephant transfer) ಭಾವನಾತ್ಮಕ ಬೀಳ್ಕೊಡುಗೆ ಸರ್ಕಾರದ ಸೂಚನೆ ಮೇರೆಗೆ … Read more

ಶಿವಮೊಗ್ಗದಲ್ಲಿಯು ನಡೆದಿತ್ತು ಪುನೀತ್ ರಾಜಕುಮಾರ್ ಗಂಧದ ಗುಡಿ ಸಾಕ್ಷ್ಯಚಿತ್ರದ ಶೂಟಿಂಗ್

Puneeth-Rajkumar-Gandhadagudi-Shooting-in-sakrebyle-shimoga

SHIMOGA | ನಟ ಪುನೀತ್ ರಾಜಕುಮಾರ್ ಅವರ ಅಭಿನಯದ ಗಂಧದ ಗುಡಿ ಸಾಕ್ಷ್ಯಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ರಾಜ್ಯದ ವಿವಿಧೆಡೆ ಈ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಣ ಮಾಡಲಾಗಿತ್ತು. ಶಿವಮೊಗ್ಗದಲ್ಲಿಯು ಶೂಟಿಂಗ್ ನಡೆದಿತ್ತು. (PUNEETH RAJKUMAR IN SHIMOGA) 2021ರ ಸೆಪ್ಟೆಂಬರ್ 1ರಂದು ಶಿವಮೊಗ್ಗ ತಾಲೂಕು ಸಕ್ರೆಬೈಲಿನ ಆನೆ ಬಿಡಾರದಲ್ಲಿ ಗಂಧದಗುಡಿ ಸಾಕ್ಷ್ಯಚಿತ್ರದ ಶೂಟಿಂಗ್ ನಡೆಸಲಾಗಿತ್ತು. ನಟ ಪುನೀತ್ ರಾಜಕುಮಾರ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬಿಡಾರದಲ್ಲಿ ಆನೆಗಳ ಕ್ರಾಲ್ ಇರುವ ಜಾಗದಲ್ಲಿ ಚಿತ್ರೀಕರಣ ನೆರವೇರಿಸಲಾಗಿತ್ತು. ಪುನೀತ್ ರಾಜಕುಮಾರ್ ಅವರು ಬಂದಿರುವ ವಿಚಾರ … Read more