ಭದ್ರಾವತಿಯಲ್ಲಿ ಆಯುಕ್ತರಿಗೆ ಕರೋನ ಪಾಸಿಟಿವ್, ಎರಡು ದಿನ ನಗರಸಭೆ ಬಂದ್
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 10 ಸೆಪ್ಟಂಬರ್ 2020 ಆಯುಕ್ತರಿಗೆ ಕರೋನ ಪಾಸಿಟಿವ್ ಬಂದ ಹಿನ್ನೆಲೆ, ಭದ್ರಾವತಿ ನಗರಸಭೆಯನ್ನು ಎರಡು ದಿನ ಬಂದ್ ಮಾಡಲಾಗುತ್ತಿದೆ. ನಗರಸಭೆ ಆವರಣವನ್ನು ಸ್ಯಾನಿಟೈಸ್ ಮಾಡಿ, ಸೀಲ್‍ಡೌನ್ ಮಾಡಲಾಗಿದೆ. ಕೋವಿಡ್ ಪರೀಕ್ಷೆಗೆ ಒಳಗಾದಾಗ ಆಯುಕ್ತರಿಗೆ ಕರೋನ ಇರುವುದು ದೃಢವಾಗಿದೆ. ಅವರು ತಮ್ಮ ಮನೆಯಲ್ಲೇ 14 ದಿನ ಕ್ವಾರಂಟೈನ್‍ಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆಯನ್ನು ಎರಡು ದಿನ ಬಂದ್ ಮಾಡಲಾಗಿದೆ. ಗುರುವಾರ ಮತ್ತು ಶುಕ್ರವಾರ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. … Read more