ಯುಕೆಜಿ ವಿದ್ಯಾರ್ಥಿನಿ ಮೇಲೆ ನಾಯಿಗಳು ದಾಳಿ
ಶಿಕಾರಿಪುರ: ಖಾಸಗಿ ಶಾಲೆಯ ಯುಕೆಜಿ ವಿದ್ಯಾರ್ಥಿನಿ, ಕಲ್ಮನೆ ಗ್ರಾಮದ ನಿಧಿ ಎಂಬಾಕೆಯ ಮೇಲೆ ಶಿಕಾರಿಪುರ ಪಟ್ಟಣದಲ್ಲಿ ಶುಕ್ರವಾರ ನಾಯಿಗಳು ದಾಳಿ (stray dog) ಮಾಡಿ ಗಾಯಗೊಳಿಸಿವೆ. ದಾಳಿಯಿಂದ ಬಾಲಕಿ ಮುಖದ ಮೇಲೆ ಗಂಭೀರ ಗಾಯಗಳಾಗಿವೆ. ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಾರ್ವಜನಿಕರು ಪುರಸಭೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ » ವಿಷ ಸೇವಿಸಿದ್ದ ಭದ್ರಾವತಿಯ ಗೃಹಿಣಿ ಚಿಕಿತ್ಸೆ ಫಲಿಸದೆ ಸಾವು