ಆನಂದಪುರದಲ್ಲಿ ಅಪರೂಪದ ಮಿಥುನ ಶಿಲ್ಪಗಳು ಪತ್ತೆ, ಶಿವಮೊಗಕ್ಕೆ ಶಿಫ್ಟ್, ಏನಿದು ಮಿಥುನ ಶಿಲ್ಪ? ಹಿನ್ನೆಲೆ ಏನು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 31 ಡಿಸೆಂಬರ್ 2019 ಸಾಗರ ತಾಲೂಕಿನ ಆನಂದಪುರದ ಕೆರೆ ಏರಿ ಮೇಲೆ ಮಿಥುನ ಶಿಲ್ಪಗಳು ಪತ್ತೆಯಾಗಿವೆ. ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ಅಧಿಕಾರಿಗಳು, ಈ ಶಿಲ್ಪಗಳನ್ನು ಶಿವಪ್ಪನಾಯಕನ ಕೋಟೆ ಆವರಣಕ್ಕೆ ತಂದಿರಿಸಿವೆ. ಮಿಥುನ ಶಿಲ್ಪಗಳು ಶಿವಮೊಗ್ಗದಲ್ಲಿ ಅತ್ಯಂತ ಅಪರೂಪ. ಫಲವತ್ತತೆಯ ಸಂಕೇತವಾಗಿರುವ ಈ ಶಿಲ್ಪಗಳು, ಕೆರೆಗಳ ಬಳಿಯಲ್ಲಿ ಅತಿ ಹೆಚ್ಚಾಗಲಿ ಸಿಗಲಿವೆ ಅನ್ನುತ್ತಾರೆ ಸಹಾಯಕ ನಿರ್ದೇಶಕ ಶೇಜೇಶ್ವರ. ಶಿವಪ್ಪನಾಯಕ ಅರಮನೆ ಆವರಣದಲ್ಲಿ ಶಿಲ್ಪಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಅಲ್ಲಿಯೇ ಇರಿಸಲು ನಿರ್ಧರಿಸಲಾಗಿದೆ. … Read more