ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆ, ತಂಪಾದ ಇಳೆ, ಎಲ್ಲೆಲ್ಲಿ ಮಳೆಯಾಗಿದೆ? ಇಲ್ಲಿದೆ ಡಿಟೇಲ್ಸ್
ಶಿವಮೊಗ್ಗ: ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಮಲೆನಾಡಿನ ಹಲವೆಡೆ ಕಳೆದ ಎರಡು ದಿನದಿಂದ ಮಳೆಯಾಗುತ್ತಿದೆ. ವರ್ಷದ ಮೊದಲ ಮಳೆ (first rain) ಸಿಂಚನದಿಂದಾಗಿ ತಾಪಮಾನ ತುಸು ತಗ್ಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಮಂಗಳವಾರ ಭದ್ರಾವತಿ, ತೀರ್ಥಹಳ್ಳಿ, ಹೊಸನಗರ ತಾಲೂಕಿನ ಕೆಲವೆಡೆ ಮಳೆ ಬಿದ್ದಿತ್ತು. ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು. ದಿಢೀರ್ ಮಳೆ ಬಂದಿದ್ದರಿಂದ ಜನರು ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆಯಬೇಕಾಯಿತು. ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು. ಮಳೆಯಿಂದ ಇಳೆ ತಂಪಾಯಿತು. ಕಳೆದ ಕೆಲವು ದಿನಗಳಿಂದ ಬೇಸಿಗೆಯ ಬಿಸಿಲಿನ ಧಗೆ … Read more