‌ATMನಿಂದ ಹಿಂತಿರುಗಿ ಬ್ಯಾಂಕಿನಲ್ಲಿ ಅಕೌಂಟ್‌ ಚೆಕ್‌ ಮಾಡಿದ ಮಹಿಳೆಗೆ ಕಾದಿತ್ತು ಶಾಕ್, ಆಗಿದ್ದೇನು?

bh-road-in-Shimoga-shivappanayaka-statue

ಶಿವಮೊಗ್ಗ: ಕರ್ನಾಟಕ ಸಂಘದ ಎದುರಿಗೆ ಇರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ (Bank ATM) ಮಹಿಳೆಯೊಬ್ಬರಿಗೆ ನಂಬಿಸಿ ಹಣ ದೋಚಿರುವ ಘಟನೆ ನಡೆದಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೆಲಸ ಹುಡುಕುತ್ತಿರುವವರಿಗೆ GOOD NEWS, ಇಲ್ಲಿದೆ ಉತ್ತಮ ವೇತನದ ಉದ್ಯೋಗ ಹೊಳೆಹೊನ್ನೂರಿನ ಶಿವಮ್ಮ ಎಂಬುವವರು ಹಣ ಬಿಡಿಸಲು ಎಟಿಎಂ ಕೇಂದ್ರಕ್ಕೆ ಹೋಗಿದ್ದರು. ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ಹಣ ಬಿಡಿಸಿಕೊಡುವುದಾಗಿ ನಂಬಿಸಿದ್ದಾನೆ. ಆತನ ಮಾತು ನಂಬಿ ಮಹಿಳೆಯು ತನ್ನ ಎಟಿಎಂ ಕಾರ್ಡ್ ಹಾಗೂ ಪಿನ್ ನೀಡಿದ್ದಾರೆ. ವ್ಯಕ್ತಿಯು ಹಣ ಬರುತ್ತಿಲ್ಲ … Read more

ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ಕಾರು ನಜ್ಜುಗುಜ್ಜು, ಎಲ್ಲಿ? ಹೇಗಾಯ್ತು ಘಟನೆ?

car-and-bus-incident-at-Kaspadi-in-Sagara-Taluk

ಸಾಗರ: ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿದ್ದು (collision) ದಂಪತಿ ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಾಸ್ಪಾಡಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಸಿದ್ದೇಶ್ವರ ಮತ್ತು ಅವರ ಪತ್ನಿ ತಲೆಗೆ ಗಂಭೀರ ಪೆಟ್ಟಾಗಿದೆ. ಅವರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಹೇಗಾಯ್ತು ಘಟನೆ? ಬಸ್ಸು ಮಣಿಪಾಲದಿಂದ ಸಾಗರಕ್ಕೆ ತೆರಳುತ್ತಿತ್ತು. ಕಾರು ಸಾಗರದ ಕಡೆಯಿಂದ ದಾವಣಗೆರೆಗೆ ತೆರಳುತ್ತಿತ್ತು. ಕಾಸ್ಪಾಡಿ ಬಳಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಘಟನೆಯಲ್ಲಿ ಕಾರಿನ ಮುಂಭಾಗ … Read more

ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಲೋಕಾಯುಕ್ತ ತಂಡ ದಿಢೀರ್‌ ಭೇಟಿ, ಪರಿಶೀಲನೆ

Shimul-Milk-Dairy-Machenahalli

ಶಿವಮೊಗ್ಗ: ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಸಂಸ್ಥೆಯ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ (Lokayukta raid) ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್.ಪಿ. ಮಂಜುನಾಥ್ ಚೌಧರಿ ಅವರ ನೇತೃತ್ವದಲ್ಲಿ 8 ಅಧಿಕಾರಿಗಳ ತಂಡ ಪರಿಶೀಲನೆಯಲ್ಲಿ ತೊಡಗಿದೆ.   ಶಿಮುಲ್ ಸಂಸ್ಥೆಯಲ್ಲಿ ನಡೆಯುತ್ತಿರುವ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಹಣದ ವ್ಯವಹಾರ ನಡೆದಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ದೂರಿನ ಹಿನ್ನೆಲೆ ದಾಖಲೆ ಪರಿಶೀಲಿಸಲು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ … Read more

ಕಾಡು ಹಂದಿಯ ಮಾಂಸ ಸಹಿತ ಅರೋಪಿ ಅರೆಸ್ಟ್‌

KUMSI-NEWS

ಶಿವಮೊಗ್ಗ: ತಾಲೂಕಿನ ಬಾಳೆಕೊಪ್ಪದ ಜಮೀನಿನಲ್ಲಿ ಕಾಡುಹಂದಿಯನ್ನು (wild boar) ಬೇಟೆ ಮಾಡಿ ಮಾಂಸ ಮಾಡುತ್ತಿದ್ದವರನ್ನು ಆಯನೂರು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬಾಳೆಕೊಪ್ಪದ ಕೃಷ್ಣ, ಶಿವು, ಹುಚ್ಚರಾಯ, ರವಿ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ಸುಮಾರು 64 ಕೆ.ಜಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ » ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಚಾಕು ಇರಿತ ಕೇಸ್‌, ಮೂವರು ಅರೆಸ್ಟ್‌, ಏನಿದು ಪ್ರಕರಣ? ಆರೋಪಿ ಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸಿಎಫ್‌ ಅಜ್ಜಯ್ಯ, ಎಸಿಎಫ್‌ ವಿಜಯ್ … Read more