ಶಿವಮೊಗ್ಗದಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಪೋಟ, ಎಲ್ಲಿ? ಏನೇನು ಹಾನಿಯಾಗಿದೆ?

LPG-cylinder-incident-at-Siddeshwara-nagara-in-Shimoga

ಶಿವಮೊಗ್ಗ: ಅಡುಗೆ ಅನಿಲ ಸಿಲಿಂಡರ್‌ (cylinder) ಸ್ಪೋಟಗೊಂಡು ಮನೆ ಸಂಪೂರ್ಣ ಹಾನಿಯಾಗಿದೆ. ಸಿದ್ದೇಶ್ವರ ನಗರದ 4ನೇ ಅಡ್ಡರಸ್ತೆಯ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೇಗಾಯ್ತು ಘಟನೆ? ಧರ್ಮಪ್ಪ ಎಂಬುವವರು ಬಾಡಿಗೆಗೆ ಇದ್ದ ಮನೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಸಿಲಿಂಡರ್‌ ಸ್ಪೋಟಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಹಾನಿಯಾಗಿವೆ. ಶೀಟ್‌ ಛಾವಣಿ ಹಾರಿ ಹೋಗಿದೆ. ಇನ್ನು, ಧರ್ಮಪ್ಪ ಅವರ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸ್ಪೋಟದ ರಭಸಕ್ಕೆ ಪಕ್ಕದ … Read more

ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಬಸ್‌, ಬೈಕ್‌ ಡಿಕ್ಕಿ, ಸಿರಿಗೆರೆಯ ಇಬ್ಬರಿಗೆ ಗಾಯ

bike-collision-with-bus-in-sagara-road-in-shimoga.

ಶಿವಮೊಗ್ಗ: ಪಿಇಎಸ್‌ ಕಾಲೇಜು ಸಮೀಪ ಸಾಗರ ರಸ್ತೆಯಲ್ಲಿ ಬಸ್ ಹಾಗೂ ಬೈಕ್ (bike collision) ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಶಿವಮೊಗ್ಗದಿಂದ ಸಾಗರದ ಕಡೆಗೆ ಹೋಗುತ್ತಿದ್ದ ಬಸ್ ಮತ್ತು ಬೈಕ್ ನಡುವೆ ಈ ಡಿಕ್ಕಿ ಸಂಭವಿಸಿದೆ. ಗಾಯಗೊಂಡವರು ಶಿವಮೊಗ್ಗ ಸಮೀಪದ ಸಿರಿಗೆರೆ ಮೂಲದವರು ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ರಭಸಕ್ಕೆ ಹೊಸ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more

ಶಿವಮೊಗ್ಗದ ಈ ಅಂಡರ್‌ ಪಾಸ್‌ ಮತ್ತೆ ಕತ್ತಲುಮಯ, ಇತ್ತ ಗಮನ ಹರಿಸುತ್ತಾರಾ ಅಧಿಕಾರಿಗಳು?

No-lights-in-savalanga-road-under-pass-near-usha-nursing-home

ಶಿವಮೊಗ್ಗ: ಸವಳಂಗ ರಸ್ತೆಯ ಅಂಡರ್‌ ಪಾಸ್‌ (Underpass) ಮತ್ತೆ ಕತ್ತಲುಮಯವಾಗಿದೆ. ಇಲ್ಲಿ ಅಳವಡಿಸಿದ್ದ ಅರ್ಧಕ್ಕರ್ಧ ಲೈಟುಗಳು ಆಫ್‌ ಆಗಿವೆ. ಸಂಜೆಯಾಗುತ್ತಲೇ ಈ ಭಾಗದ ಜನರು ಕತ್ತಲಲ್ಲೇ ಓಡಾಡುವಂತಾಗಿದೆ. ಶಿವಮೊಗ್ಗ ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿ ಇರುವ ಅಂಡರ್‌ ಪಾಸ್‌ನಲ್ಲಿ ಲೈಟುಗಳು ಆನ್‌ ಆಗುತ್ತಿಲ್ಲ. ಕಳೆದ ಮೂರ್ನಾಲ್ಕು ದಿನದಿಂದ ಇಲ್ಲಿ ಇದೇ ಸ್ಥಿತಿ ಇದೆ. ಆದರೆ ಈತನಕ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೃಷಿ ನಗರ, ಡಾಲರ್ಸ್‌ ಕಾಲೋನಿ, ಬಸವೇಶ್ವರ ನಗರ, ಕೀರ್ತಿ ನಗರ ಬಡಾವಣೆಗಳ … Read more