ಶಿವಮೊಗ್ಗ ನಗರದ ವಿವಿಧೆಡೆ ಎರಡು ದಿನ ಕುಡಿಯುವ ನೀರು ವ್ಯತ್ಯಯ, ಎಲ್ಲೆಲ್ಲಿ?

Drinking-Water-Tap

ಶಿವಮೊಗ್ಗ: ಮೆಸ್ಕಾಂ ವತಿಯಿಂದ ತುರ್ತು ಕಾಮಗರಿ ನಡೆಸಲಾಗುತ್ತಿದೆ. ಲಾಲ್ ಬಹದ್ದೂರ್ ಶಾಸ್ತ್ರೀ ಮಧ್ಯಂತರ ಯಂತ್ರಗಾರಕ್ಕೆ ಜ.7 ರಂದು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಆದ್ದರಿಂದ ಜನವರಿ 7 ಮತ್ತು 8 ರಂದು ಸೋಮಿನಕೊಪ್ಪ, ತ್ಯಾವರೆಚಟ್ನಹಳ್ಳಿ, ಬೊಮ್ಮನಕಟ್ಟೆ, ಶಾಂತಿನಗರ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ (Drinking Water) ಸರಬರಾಜು ವ್ಯತ್ಯಯವಾಗಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.