ಶಿವಮೊಗ್ಗದಲ್ಲಿ ರೌಡಿಶೀಟರ್‌ ಕಾಲಿಗೆ ಗುಂಡು ಹಾರಿಸಿದ ಪೊಲೀಸ್‌, ಯಾರದು ರೌಡಿ ಶೀಟರ್‌? ಆಗಿದ್ದೇನು?

Rowdysheeter-incident-in-Shimoga-

ಶಿವಮೊಗ್ಗ: ನಗರದಲ್ಲಿ ಇತ್ತೀಚೆಗೆ ನಡೆದ ಅಮ್ಜದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೌಡಿಶೀಟರ್‌ (Rowdy Sheeter) ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ರೌಡಿಶೀಟರ್‌ ಅಕ್ಬರ್‌ (21) ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಶಿವಮೊಗ್ಗ ನಗರ ಹೊರವಲಯದ ಪುರಲೆ ಬಳಿ ನಡೆದಿದೆ. ನ್ಯೂಮಂಡ್ಲಿಯ ನಿವಾಸಿ ಅಕ್ಬರ್ ಮೇಲೆ ಈಗಾಗಲೇ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, … Read more

ಶಿವಮೊಗ್ಗ ಏರ್‌ಪೋರ್ಟ್‌ ಬಳಿ ಶಾಪಿಂಗ್‌ ಮಾಲ್‌, ಹೊಟೇಲ್‌, KSIIDC ಅಧ್ಯಕ್ಷರು ಏನೆಲ್ಲ ಹೇಳಿದರು? ಇಲ್ಲಿದೆ ಹೈಲೈಟ್ಸ್‌

KSIIDC-President-Nanjayanamata-speaks-about-shimoga-airport

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ (Airport) ಬಳಕೆಯಾಗಿ ಉಳಿದಿರುವ 111 ಎಕರೆ ಪ್ರದೇಶದಲ್ಲಿ ಶಾಪಿಂಗ್‌ ಮಾಲ್‌, ಹೊಟೇಲ್‌ ನಿರ್ಮಿಸುವ ಯೋಚನೆ ಇದೆ ಎಂದು ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ತಿಳಿಸಿದರು. ಮಲ್ನಾಡ್‌ ಶೈರ್‌ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಜಿ.ನಂಜಯ್ಯನಮಠ, ಶಿವಮೊಗ್ಗ ವಿಮಾನ ನಿಲ್ದಾಣದ ಬಳಕೆಗೆ 780 ಎಕರೆ ಜಾಗವಿದೆ. ಉಳಿಕೆ 111 ಎಕರೆ ಜಾಗವನ್ನು ಲೀಸ್‌ಗೆ ನೀಡುವ ಯೋಚನೆ ಇದೆ. ಅಲ್ಲಿ ಶಾಪಿಂಗ್‌ ಮಾಲ್‌ ಅಥವಾ ಹೊಟೇಲ್‌ ಸೇರಿ ಸಾರ್ವಜನಿಕ ಬಳಕೆಗೆ … Read more

ಈ ರಸ್ತೆಯಲ್ಲಿ ಹೆಡ್‌ಲೈಟ್‌ ಗಟ್ಟಿ ಇದ್ದರಷ್ಟೆ ಜೀವಕ್ಕೆ ಗ್ಯಾರಂಟಿ, ರಾತ್ರಿಯು ಜನ ಓಡಾಡುವ ರೋಡಲ್ಲಿ ಇದೆಂಥಾ ದುಸ್ಥಿತಿ?

No-Street-lights-at-sarvajna-circle-in-shimoga-city.webp

ಶಿವಮೊಗ್ಗ: ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎನ್ನುವಂತಿದೆ ಈ ರಸ್ತೆಯ ಡಿವೈಡರ್‌ ಮೇಲಿರುವ ಬೀದಿ ದೀಪಗಳ (Street Light) ಸ್ಥಿತಿ. ಮೆಸ್ಕಾಂನ ಕಾರ್ಯ ಮತ್ತು ಪಾಲನ ಕಚೇರಿ ಮುಂಭಾಗದಲ್ಲಿಯೆ ಇರುವ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಶಿವಮೊಗ್ಗದ ಸರ್ವಜ್ಞ ವೃತ್ತದಲ್ಲಿ ಬೀದಿ ದೀಪ ಬೆಳಗದೆ ತಿಂಗಳುಗಳೆ ಉರುಳಿವೆ. ವಾಹನಗಳ ಹೆಡ್‌ಲೈಟ್‌ನಿಂದಷ್ಟೆ ಈ ರಸ್ತೆಯಲ್ಲಿ ಬೆಳಕು ಕಾಣುತ್ತಿದೆ. ಹಗಲು ರಾತ್ರಿ ವಾಹನ ಸಂಚಾರ ಸರ್ವಜ್ಞ ವೃತ್ತ ಶಿವಮೊಗ್ಗದ ರೈಲ್ವೆ ನಿಲ್ದಾಣ, ಬಾಲರಾಜ ಅರಸ್‌ ರಸ್ತೆ, ಹೊನ್ನಾಳಿ ರಸ್ತೆ, ಶಂಕರಮಠ ರಸ್ತೆಗೆ … Read more

ಶಿವಮೊಗ್ಗದ ವಿದ್ಯಾನಗರ ಮೇಲ್ಸೇತುವೆ ಸರ್ಕಲ್‌ಗೆ ನಾಮಕರಣ, ನಾಮಫಲಕ ಅನಾವರಣ

071025-Valmiki-circle-board-inaugurated-at-vidyanagra-bridge-in-Shimoga.webp

ಶಿವಮೊಗ್ಗ: ವಿದ್ಯಾನಗರದ ಮೇಲ್ಸೇತುವೆ ಸಂಪರ್ಕಿಸುವ ಸರ್ಕಲ್‌ಗೆ ಮಹರ್ಷಿ ವಾಲ್ಮೀಕಿ ವೃತ್ತ (Valmiki Circle) ಎಂದು ಹೆಸರಿಡಲಾಗಿದೆ. ವಾಲ್ಮೀಕಿ ಜಯಂತಿಯನ್ನು ಶಾಸಕ ಎಸ್‌.ಎನ್.ಚನ್ನಬಸಪ್ಪ, ಮಹರ್ಷಿ ವಾಲ್ಮೀಕಿ ವೃತ್ತದ ನಾಮಫಲಕ ಅನಾವರಣಗೊಳಿಸಿದರು. ಸೈನ್ಸ್‌ ಮೈದಾನದವರೆಗೆ ಮೆರವಣಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಗರದ ಸೈನ್ಸ್‌ ಮೈದಾನದಿಂದ ವಾಲ್ಮೀಕಿ ಸಭಾಭವನದವರೆಗೆ ಮೆರವಣಿಗೆ ನಡೆಸಲಾಯಿತು. ವಾಲ್ಮೀಕಿ ಭಾವಚಿತ್ರವನ್ನು ವಾಹನದಲ್ಲಿ ಇರಿಸಿ ಸಮುದಾಯದವರು ಮೆರವಣಿಗೆಯಲಿ ಪಾಲ್ಗೊಂಡಿದ್ದರು. ವಾಲ್ಮೀಕಿ ಸಭಾ ಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶಾಸಕ ಎಸ್‌.ಎನ್‌. ಚನ್ನಸಬಪ್ಪ ಉದ್ಘಾಟಿಸಿದರು. … Read more

ಶಿವಮೊಗ್ಗ ಜಿಲ್ಲೆಗೆ ಮತ್ತೆ ಮಳೆ ಮುನ್ಸೂಚನೆ, ಹವಾಮಾನ ಇಲಾಖೆಯಿಂದ ಅಲರ್ಟ್‌ ಪ್ರಕಟ

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿ ಬಿಸಿಲಿನ ಅಬ್ಬರ ಮತ್ತು ಧಗೆ ಹೆಚ್ಚಳವಾಗಿತ್ತು. ಆದರೆ ಇವತ್ತು ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹವಾಮಾನ ಇಲಾಖೆ (Weather) ಯಲ್ಲೋ ಅಲರ್ಟ್‌ ಘೋಷಿಸಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 31 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ … Read more

ಶುಭೋದಯ ಶಿವಮೊಗ್ಗ ಸುಭಾಷಿತ | 8 ಅಕ್ಟೋಬರ್‌ 2025 | ಸತ್ಯ ಮತ್ತು ನ್ಯಾಯದ ಬಗ್ಗೆ ಇಂದಿನ ಸುಭಾಷಿತ

SHUBODAYA-SHIVAMOGGA2

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes) » ಸುಭಾಷಿತಕ್ಕೆ ಉದಾಹರಣೆ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ತಾರಕಕ್ಕೇರಿತ್ತು. ಒಮ್ಮೆ ಗಾಂಧೀಜಿ ಅವರನ್ನು ರೈಲಿನ ಪ್ರಥಮ ದರ್ಜೆ ಕೋಚ್‌ನಿಂದ ಹೊರಗೆ ದಬ್ಬಲಾಗಿತ್ತು. ಈ ಘಟನೆ ಅವರನ್ನು ಭಾರಿ ಘಾಸಿಗೊಳಿಸಿತು. ಸತ್ಯ ಮತ್ತು ನ್ಯಾಯಕ್ಕಾಗಿ ಅಹಿಂಸೆಯ ಮಾರ್ಗದಲ್ಲಿ ಹೋರಾಟ ಆರಂಭಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಪ್ರಮುಖ ಪಾತ್ರ ವಹಿಸಲು ಈ ಘಟನೆಯು ಪ್ರಮುಖ ಕಾರಣವಾಯಿತು. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, … Read more

ಇವತ್ತಿನ ಪಂಚಾಂಗ | 8 ಅಕ್ಟೋಬರ್‌ 2025 | ಈ ದಿನ ಹೇಗಿದೆ? ಯಾವ್ಯಾವ ಸಮಯ ಯಾವಾಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Online Panchanga) ವಾರ : ಬುಧವಾರ, 8 ಅಕ್ಟೋಬರ್‌ 2025 – ದ್ವಿತೀಯ ಸೂರ್ಯೋದಯ : 6.18 am ಸೂರ್ಯಾಸ್ತ : 6.13 pm ನಕ್ಷತ್ರ : ಅಶ್ವಿನಿ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.41 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.05 ರಿಂದ 6.18ರವರೆಗೆ ಅಭಿಜಿತ್‌ – ವಿಜಯ ಮುಹೂರ್ತ ಮಧ್ಯಾಹ್ನ 2.14 ರಿಂದ 3.02ರವರಗೆ ಗೋಧೂಳಿ ಮುಹೂರ್ತ ಸಂಜೆ 6.13 ರಿಂದ 6.37ರವರೆಗೆ ರಾಹು, ಯಮಗಂಡ, ಗುಳಿಕ … Read more

ಮಾರಕಾಸ್ತ್ರದಿಂದ ಇರಿದು ಮನೆಯಲ್ಲಿದ್ದ ಒಂಟಿ ಮಹಿಳೆಯ ಹತ್ಯೆ

Crime-News-General-Image

ಕುಂಸಿ: ಮಾರಕಾಸ್ತ್ರದಿಂದ ಚುಚ್ಚಿ ವೃದ್ಧೆಯೊಬ್ಬರನ್ನು (Woman) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಕುಂಸಿಯ ರಥಬೀದಿಯ ಮನೆಯಲ್ಲಿ ಘಟನೆ ಸಂಭವಿಸಿದೆ. ಬಸಮ್ಮ (65) ಮೃತರು. ಮನೆಯಲ್ಲಿ ವೃದ್ಧೆ ಒಬ್ಬರೆ ವಾಸವಾಗಿದ್ದರು. ಶಿವಮೊಗ್ಗದಲ್ಲಿ ವಾಸವಾಗಿರುವ ಪುತ್ರ ಗುರುವಾರ ಮನೆಗೆ ಬಂದು ಬಾಗಿಲು ಬಡಿದರು ತೆಗೆದಿರಲಿಲ್ಲ. ಹೆಂಚು ತೆಗೆದು ಪರಿಶೀಲಿಸಿದಾಗ ಬಸಮ್ಮ ಅವರ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಕುತ್ತಿಗೆ ಕೊಯ್ದು, ಹೊಟ್ಟೆ ಭಾಗದಲ್ಲಿ ಹಲವೆಡೆ ಇರಿದಿರುವುದು ಗೊತ್ತಾಗಿದೆ.   ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಂಸಿ ಠಾಣೆ ಪೊಲೀಸರು … Read more

ಶಿವಮೊಗ್ಗ ಜಂಬೂ ಸವಾರಿಗೆ ಚಾಲನೆ, ಅಂಬಾರಿ ಮೆರವಣಿಗೆ ಆರಂಭ

021025-Shimoga-Dasara-Jamboo-savari-begins.webp

ದಸರಾ ಸುದ್ದಿ: ಶಿವಮೊಗ್ಗ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ (Jamboo Savari) ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ನಾಡದೇವಿ ಚಾಮುಂಡೇಶ್ವರಿಯ ಬೆಳ್ಳಿ ಅಂಬಾರಿಯನ್ನ ಹೊತ್ತು ಸಾಗರ ಆನೆ ಮೆರವಣಿಗೆಯಲ್ಲಿ ಸಾಗಿತು. ಇದಕ್ಕೂ ಮೊದಲು ಶಿವಪ್ಪನಾಯಕ ಅರಮನೆ ಮುಂಭಾಗ ನಂದಿ ಕೋಲಿಗೆ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಪೂಜೆ ಸಲ್ಲಿಸಿದರು. ಬಳಿಕ ದೇವಿಗೆ ಪುಷ್ಪ ನಮನ ಸಲ್ಲಿಸಿದರು. ಉಸ್ತುವಾರಿ ಸಚಿವನಾಗಿ ಇದು ಮೂರನೆ ವರ್ಷದ ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಕಳೆದ ವರ್ಷಕ್ಕಿಂತಲು ಈ ಬಾರಿ … Read more

ಶಿವಮೊಗ್ಗ ಸಿಟಿಯ ಮತ್ತೊಂದು ರಸ್ತೆಯಲ್ಲಿ ಒನ್‌ ವೇ ಸಂಚಾರ, ಜಿಲ್ಲಾಧಿಕಾರಿ ಆದೇಶ

300925-Indira-Gandhi-road-in-Shimoga-One-Way.webp

ಶಿವಮೊಗ್ಗ: ನಗರದ ಮತ್ತೊಂದು ರಸ್ತೆಯಲ್ಲಿ ವಾಹನಗಳಿಗೆ ಒನ್‌ ವೇ (One Way) ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಶಿವಮೊಗ್ಗದ ಇಂದಿರಾ ಗಾಂಧಿ ರಸ್ತೆಯಲ್ಲಿ ಇನ್ಮುಂದೆ ಏಕಮುಖ ಸಂಚಾರ ಇರಲಿದೆ. ಜಿಲ್ಲಾಧಿಕಾರಿ ಆದೇಶದಲ್ಲಿ ಏನಿದೆ? ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಜಿಲ್ಲಾ ಕಾಂಗ್ರೆಸ್‌ ಕಚೇರಿ ಮುಂಭಾಗ ಇರುವ ಇಂದಿರಾ ಗಾಂಧಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಗೆ ಅಧಿಸೂಚನೆ ಹೊರಡಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ. ಒನ್‌ ವೇ ಯಾವುದು?: ಬಾಲರಾಜ್ ಅರಸ್ ರಸ್ತೆ ಕಡೆಯಿಂದ ಶ್ರೀ ರಾಘವೇಂದ್ರ ಸ್ವಾಮಿ … Read more