ಜೇನುಕಲ್ಲಮ್ಮ ದೇಗುಲಕ್ಕೆ ನೂತನ ಅಧ್ಯಕ್ಷರ ಆಯ್ಕೆ, ಹೊಸ ಯೋಜನೆಗಳ ಕುರಿತು ಚರ್ಚೆ

Kalgodu-Rathnakar-new-president-of-Jenukallama-temple

ಹೊಸನಗರ: ಪುರಾಣ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ (president) ಕಲಗೋಡು ರತ್ನಾಕರ್‌ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ದೇವಸ್ಥಾನದ ವ್ಯವಸ್ಥಾಪನೆಗೆ ಮುಜರಾಯಿ ಇಲಾಖೆಯಿಂದ 9 ಸದಸ್ಯರ ಸಮಿತಿ ರಚಿಸಲಾಗಿದೆ. ಅಧ್ಯಕ್ಷ ಕಲಗೋಡು ರತ್ನಾಕರ್‌ ನೇತೃತ್ವದಲ್ಲಿ ವ್ಯವಸ್ಥಾಪನಾ ಸಮಿತಿಯು, ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಭೇಟಿಯಾಗಿ ಗೌರವಸಿತು.